Sunday, August 2, 2026
Sunday, August 2, 2026

Kuvempu University ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಸಮಗ್ರ ಹಸಿರು ನೀತಿ ಅಳವಡಿಸಬೇಕು- ಪ್ರೊ.ಶರತ್ ಅನಂತಮೂರ್ತಿ

Date:

Kuvempu University ಪರಿಸರ ಮಾಲಿನ್ಯ ತಡೆಗಟ್ಟುವ ಮೂಲಕ ಹಸಿರು ಆರ್ಥಿಕತೆಯೆಡೆಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಭಾರತ ಸಮಗ್ರವಾದ ಹಸಿರು ನೀತಿ ಅಳವಡಿಸಿಕೊಳ್ಳಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ ಶರತ್ ಅನಂತಮೂರ್ತಿ ಹೇಳಿದರು.

ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗ ಪರಿಸರ ಸಂರಕ್ಷಣೆಗೆ ಹಸಿರು ಪರಿಹಾರ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ‌ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಊಹಿಸಲಸಾಧ್ಯವಾದ ಆವಿಷ್ಕಾರಗಳು 20ನೇ ಶತಮಾನದಿಂದೀಚೆಗೆ ನಡೆದಿವೆ. ಒಟ್ಟಾರೆ ನಾಗರಿಕತೆಯ ರಚನಾತ್ಮಕ ಅಭಿವೃದ್ಧಿಯ ದೃಷ್ಟಿಕೋನದಿಂದ ಕೈಗೊಂಡ ಪರಮಾಣು ಸಂಶೋಧನೆಯಂತಹ ಕೆಲವು ಚಟುವಟಿಕೆಗಳು ಮನುಕುಲಕ್ಕೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅಸಂಪ್ರದಾಯಿಕ ಇಂಧನ ಮೂಲಗಳ ಬಳಕೆ ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ತೇಜನ ನೀಡುವುದು ಮತ್ತಿತರ ಉಪಕ್ರಮಗಳು ಸೇರಿದಂತೆ ಸಮಗ್ರವಾದ ಹಸಿರು ನೀತಿ ಅಳವಡಿಸಿಕೊಳ್ಳುವುದು ಸುಸ್ಥಿರ ಅಭಿವೃದ್ಧಿಗೆ ಅನಿವಾರ್ಯ ಎಂದು ಪ್ರತಿಪಾದಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಮಾತನಾಡಿ ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣ, ತ್ಯಾಜ್ಯನಿರ್ವಹಣೆಯಲ್ಲಿ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ನಾಗರಿಕ ಸಂಘಟನೆಗಳ ಸಾಮೂಹಿಕ‌ ಪ್ರಯತ್ನ ಅತ್ಯಗತ್ಯ ಎಂದರು.

Kuvempu University ಕುಲಸಚಿವ ಮಂಜುನಾಥ್. ಎ.‌ ಎಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಪ್ರೊ.‌ ಸುನಿಲ್ ನೌತಿಯಾಲ್, ಸುಜಿತ್ ಕುಮಾರ್ ಡೋಂಗ್ರೆ, ಡಾ. ಶರತ್ ಚಂದ್ರ, ವಿಭಾಗದ ಅಧ್ಯಕ್ಷ ಪ್ರೊ.‌ ಕೆ. ಯೋಗೇಂದ್ರ, ಪ್ರೊ.‌ ಜೆ.‌ ನಾರಾಯಣ, ಡಾ.‌ ಹೀನಾ ಕೌಸರ್, ಡಾ.‌ ಬಸವರಾಜಪ್ಪ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Sivakumar ರಾಜ್ಯದಲ್ಲಿ 70.000 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ – ಡಿ.ಕೆ.ಶಿವಕುಮಾರ್

D.K.Sivakumar ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಹೆಚ್ಚು ಸರ್ಕಾರಿ...

Rotary Club Shivamogga ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ರೊಟೇರಿಯನ್ಸ್ ದಾರಿದೀಪವಾಗಿದ್ದಾರೆ- ಸಿ.ಎಸ್.ಷಡಾಕ್ಷರಿ

Rotary Club Shivamogga ರೋಟರಿ ಸದಸ್ಯರುಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಸಾಮಾಜಿಕ...

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...