Thursday, September 17, 2026
Thursday, September 17, 2026

Vardhanti Utsav ಬಂಗಾರಮಕ್ಕಿ ಶ್ರೀವೀರಾಂಜನೇಯ ಸ್ವಾಮಿ ಸಂಸ್ಥಾನದಲ್ಲಿ ವಿವಿಧ ಉತ್ಸವಗಳು

Date:

Vardhanti Utsav ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿಶ್ವ ವೀರಾಂಜನೇಯ ಮಹಾ ಸಂಸ್ಥಾನ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.), ಶ್ರೀ ಕ್ಷೇತ್ರ ಬಂಗಾರಮಕ್ಕಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ. 29ಮತ್ತು 30ರಂದು ಶ್ರೀ ವೀರಾಂಜನೇಯ ದೇವರ, ಶ್ರೀ ಗೋಪಾಲಕೃಷ್ಣ ದೇವರ, ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶ್ರೀ ಚೌಡೇಶ್ವರಿ ದೇವಿಯ ವರ್ಧಂತಿ ಉತ್ಸವ ಆಯೋಜನೆಗೊಂಡಿದೆ.

ಇದರ ಅಂಗವಾಗಿ ಮಾ. 29ರಂದು ಗಣಪತಿ ಪೂಜೆ, ಪುಣ್ಯಾಹ, ಶ್ರೀ ದೇವರ ಕಲಾವೃದ್ಧಿ ಹವನ, 28 ನಾಳಿಕೇರ ಗಣಹವನ, ಮಾ. 29ರಂದು ಸಾಯಂಕಾಲ ರಾಕ್ಷೆಜ್ಞ ಪಾರಾಯಣ, ರಾಕ್ಷೆಜ್ಞ ಹವನ, ತಾರಕ ಮಂತ್ರ ಜಪ, ಆಂಜನೇಯ ಮೂಲಮಂತ್ರ ಜಪ, ಕಲಶ ಸ್ಥಾಪನೆ, ಮಾ. 30ರಂದು ಶತರುದ್ರ ಪಾರಾಯಣ, ರುದ್ರಾಭಿಷೇಕ – ರುದ್ರ ಹವನ, ಶ್ರೀ ದೇವರಿಗೆ ಫಲ- ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಗೋಪಾಲಕೃಷ್ಣ ಮಂತ್ರ ಹವನ, ಅನ್ನಪೂರ್ಣ ಮಂತ್ರ ಹವನ, ದುರ್ಗಾ ಹವನ, ರಾಮತಾರಕ ಹವನ, ಆಂಜನೇಯ ಮೂಲಮಂತ್ರ ಹವನ, ರಾಜೋಪಚಾರ ಸೇವೆ, ಪಲ್ಲಕ್ಕಿ ಉತ್ಸವ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ.

Vardhanti Utsav ಸಂದರ್ಭದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 9.30ರಿಂದ ಯಕ್ಷಗಾನ ಸೇವೆ ನಡೆಯಲಿದೆ.
ವಿಶೇಷವಾಗಿ ಮಾ. 30ರ ಸಾಯಂಕಾಲ ಪಲ್ಲಕ್ಕಿ ಉತ್ಸವ, ರಾಜೋಪಚಾರ ಸೇವೆ, ರಂಗಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದ್ದು, ಶ್ರೀ ದೇವರ ಎರಡು ದಿನದ ಸೇವೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸೇವಾರ್ಥಿಗಳು ದೇವಾಲಯದ ಸೇವಾ ಕಛೇರಿ, ದೂರವಾಣಿ ಸಂಖ್ಯೆ 6361011288, 7019342699ರಲ್ಲಿ ಸಂಪರ್ಕಿಸಬಹುದು ಎಂದು ಶ್ರೀ ಕ್ಷೇತ್ರದ ಆಡಳಿತಾಽಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...