Saturday, May 23, 2026
Saturday, May 23, 2026

Sharada Pooja ಶಾಲೆ ನೈತಿಕತೆಯ ಪಾಠ ಕಲಿಸುವ ದೇಗುಲ- ಎನ್.ಎನ್.ಕಬ್ಬೂರ್

Date:

Sharada Pooja  ಶಾಲೆ ಎಂದರೆ ಅಕ್ಷರ ಜ್ಞಾನ ತಿಳಿಸುತ್ತಾ, ಅಭ್ಯಾಸ ಮಾಡಿಸುತ್ತಾ, ಜೀವನದಲ್ಲಿ ಎದುರಾಗುವ ಹಲವಾರು ಸಂದರ್ಭಗಳನ್ನು ನಿಭಾಯಿಸಲು ಹಾಗೂ ಸತ್ಯದ ದಾರಿಯಲ್ಲಿ ನಡೆಯಲು ನೈತಿಕತೆಯ ಪಾಠ ಕಲಿಸುವ ದೇಗುಲ, ಇಲ್ಲಿ ಅಕ್ಷರ ಪಾಠದ ಜೊತೆಗೆ ಜೀವನದ ಪಾಠವನ್ನೂ ಕಲಿಸಲಾಗತ್ತೆ ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸವದತ್ತಿ ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ ಸರಸ್ವತಿ ಪೂಜೆ ಹಾಗೂ ಐದನೇ ತರಗತಿ ಮಕ್ಕಳ ಬೀಳ್ಕೋಡುವ ಸಮಾರಂಭದಲ್ಲಿ ಅವರು ಮಾತನಾಡಿದರು. “ಇಂದಿನ ಮಕ್ಕಳು ನಾಳೆಯ ಉತ್ತಮ ನಾಗರಿಕರಾಗಲು ಅವರ ಜೀವನದಲ್ಲಿ ಶಾಲೆಯು ಭದ್ರ ಬುನಾದಿ ಹಾಕುತ್ತದೆ” ಎಂದು ಶಿಕ್ಷಕಿ ಎಮ್.ಆರ್.ಫಂಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿದ್ಯಾ ಗಾಣಗಿ ಮಾತನಾಡಿ, ನಿಮ್ಮ ಶಿಕ್ಷಕರಿಗೆ, ನಿಮ್ಮ ಶಾಲೆಗೆ, ನಿಮ್ಮ ಕುಟುಂಬಕ್ಕೆ ಎಂದಿಗೂ ಕೆಟ್ಟ ಹೆಸರು ಬಾರದಂತೆ ಶಿಕ್ಷಣದಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು.

Sharada Pooja  ನಂತರ ವಿದ್ಯಾದೇವತೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ಮಕ್ಕಳು ಶಿಕ್ಷಕರ ಬಗೆಗಿನ ತಮ್ಮ ಅಭಿಪ್ರಾಯ ಹಂಚಿಕೊಂಡರು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ-ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...