Kuvempu University ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ’ ಈ ಅರಿವು ನಮಗೆಲ್ಲರಿಗೂ ಇರಬೇಕಾದ್ದು ಅತ್ಯಂತ ಅವಶ್ಯ, ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಅಡಿಯಲ್ಲಿ ನೆಮ್ಮದಿಯ ಜೀವನವನ್ನು ನಡೆಸುವ ಹಕ್ಕನ್ನು ಪಡೆದಿದ್ದಾನೆ. ಸಂವಿಧಾನದ ಆಶಯಗಳು ಜನಸಾಮಾನ್ಯರಿಗೆ ತಲುಪುವ ಉದ್ದೇಶಕ್ಕಾಗಿ ಈ ಜಾಗೃತಿ ಚಾರಣವನ್ನು ಹಮ್ಮಿಕೊಳ್ಳಲಾಗಿದೆ. ಅಂತಯೇ ಜಾಗೃತ ಮತದಾರರಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ಕುವೆಂಪು ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ ಶುಭಾ ಮರವಂತೆ ಹೇಳಿದರು.
ಸಂವಿಧಾನ ಮತ್ತು ಮತದಾನ ಜಾಗೃತಿ ಅಂಗವಾಗಿ ಕೊಡಚಾದ್ರಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಚಾರಣ ತರಬೇತಿ ಮತ್ತು ಸಾಹಸ ಕ್ರೀಡೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಮತದಾನದ ತರಬೇತುದಾರರಾದ ನವೀದ್ ಅಹಮದ್ ಮಾತನಾಡಿ, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಮತದಾನದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಒಬ್ಬ ಪ್ರಜ್ಞಾವಂತ ಮತದಾರರಿಂದ ದೇಶದ ಭವಿಷ್ಯವನ್ನು ನಿರ್ಧರಿಸಬಹುದು. ಯುವಕರಲ್ಲಿ ಮತದಾನಕ್ಕೆ ಸಂಬಂಧಿಸಿದ ತಿಳುವಳಿಕೆ ಮೂಡಿಸಿದರೆ ಸಮಾಜವು ಹೆಚ್ಚು ಸುಸ್ಥಿರವಾಗುವುದು” ಎಂದು ನುಡಿದರು.
Kuvempu University ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಎನ್.ಎಸ್.ಎಸ್. ಸ್ವಯಂ ಸೇವಕ, ಸೇವಕಿಯರು, ವಿದ್ಯಾರ್ಥಿಗಳು ಮತ್ತು ಡಾ ರಾಜು ನಾಯ್ಕ್ ಎಸ್, ಕಾರ್ಯಕ್ರಮಮಾಧಿಕಾರಿಗಳು, ಸರ್ಕಾರಿ ಪ್ರ ದ ಕಾಲೇಜು, ಹೊಳೆಹನ್ನೂರು ಹಾಗೂ ಅರಸಯ್ಯ, ಕಾರ್ಯಕ್ರಮಮಾಧಿಕಾರಿಗಳು, ಸರ್ ಎಂ ವಿ ವಿಜ್ಞಾನ ಕಾಲೇಜು, ಭದ್ರಾವತಿ ಇವರು ತಂಡದ ಜೊತೆಗಿದ್ದರು. ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಇವರು ತಮ್ಮ ವಿಧ್ಯಾರ್ಥಿಗಳೊಂದಿಗೆ ಸಾಹಸ ಕ್ರೀಡೆ ಮತ್ತು ಚಾರಣ ತರಬೇತಿಯ ಮುಂದಾಳತ್ವ ವಹಿಸಿದ್ದರು.