Agri News ಬೇಗೂರು ಗ್ರಾಮದಲ್ಲಿ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ ಶಿವಮೊಗ್ಗ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ “ಸಾವಯವ ಸಿರಿ” ಯೋಜನೆಯಡಿ ಗೋಗರ್ಭ ಯೋಜನೆಯ ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ , ಕೃಷಿ ಇಲಾಖೆ, ಶಿವಮೊಗ್ಗ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಇವರ ಸಹಯೋಗದೊಂದಿಗೆ ಜಾನುವಾರುಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಶಿಕಾರಿಪುರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ: ರವಿಕುಮಾರ್ ಇವರು ವಿಶೇಷ ಕಾಳಜಿ ವಹಿಸಿ ಆಯೋಜಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ, ಶಿಕಾರಿಪುರ ಇದರ ಸಹಾಯಕ ನಿರ್ದೇಶಕರಾದ ಶ್ರೀ ಕಿರಣ್ ಕುಮಾರ್ ಹರ್ತಿ, ಕೃಷಿ ಅಧಿಕಾರಿ ಶ್ರೀ ಕೆ. ನಾಗಪ್ಪ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ರಿವಾರ್ಡ್ ಯೋಜನೆ ಪ್ರವೇಶ ದ್ವಾರ ಚಟುವಟಿಕೆಯಡಿ ಪಶುಗಳ ಚಿಕಿತ್ಸೆಗೆ ಅವಶ್ಯಕ ಖನಿಜ ಮಿಶ್ರಣ ಮತ್ತಿತರ ಔಷಧ ನೀಡಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಾವಯವ ಸಿರಿ ಯೋಜನೆಯ ಪ್ರಧಾನ ಸಂಶೋಧಕ ಮತ್ತು ಪ್ರಾಧ್ಯಾಪಕರಾದ ಡಾ: ಎನ್.ಬಿ.ಶ್ರೀಧರ ಮತ್ತು ಡಾ: ಸಂತೋಷ್ ಶಿಂಧೆ ತಜ್ಞರಾಗಿ ಅನುತ್ಪಾದಕ ರಾಸುಗಳ ತಪಾಸನೆ ಮತ್ತು ಚಿಕಿತ್ಸೆಯಲ್ಲಿ ಭಾಗವಹಿಸಿ ಅಲ್ಟಾçಸೌಂಡ್ ಉಪಕರಣ ಬಳಸಿ ಅನುತ್ಪಾದಕತೆ ಪತ್ತೆ ಮಾಡಿ ಹಾರ್ಮೋನುಗಳು ಮತ್ತು ಇತರ ದುಬಾರಿ ಔಷಧಗಳ ಮೂಲಕ ಚಿಕಿತ್ಸೆ ನಡೆಸಿದರು. ಶಿಕಾರಿಪುರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖ್ಯೆಯ ಇಲಾಖೆಯ ಪಶುವೈದ್ಯಾಧಿಕಾರಿಗಳಾದ ಡಾ: ಸುನಿಲ್ ಕುಮಾರ್ ಕೆ. ಎಂ., ಡಾ: ಶಿವಕುಮಾರ್,ಪಿ, ಮತ್ತು ಡಾ: ಸಂತೋಷ್ ಇವರು ಭಾಗವಹಿಸಿದ್ದರು. ಶ್ರೀ ಚೇತನ್ ಮತ್ತು ಸಂತೋಷ್ ಇವರು ಸಹಕರಿಸಿದರು. ವಿವಿಧ ಕಾರಣಗಳಿಂದ ಅನುತ್ಪಾದಕವಾಗಿರುವ ಒಟ್ಟು ೭೪ ರಾಸುಗಳಿಗೆ ವಿಶೇಷ ಚಿಕಿತ್ಸೆಯನ್ನು÷ನೀಡಲಾಯಿತು. ಪಶುಪಾಲನೆಯ ಬಗ್ಗೆ ಗೋಪಾಲ ಗೋಷ್ಠಿಯ ಮೂಲಕ ಮಾಹಿತಿ ನೀಡಲಾಯಿತು.ೆÊತರಿಗೆ ನಿಗದಿತ ಸಮಯದಲ್ಲಿ ತಜ್ಞರು ಸೂಚಿಸಿದ ಚಿಕಿತ್ಸೆಯನ್ನು ಜಾನುವಾರುಗಳಿಗೆ ಮಾಡಿಸಿ ಅವುಗಳನ್ನು ಉತ್ಪಾದನೆಯತ್ತ ಸಾಗುವಂತೆ ಮಾಡಬೇಕೆಂದು ಮನವರಿಕೆ ಮಾಡಿಕೊಡಲಾಯಿತು.
ಈ ವರೆಗೆ ವಿವಿಧ ಗ್ರಾಮಗಳಲ್ಲಿ ಈ ರೀತಿಯ ೨೨೬ ವಿಶೇಷ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಈ ವರೆಗೆ ಸರಾಸರಿ ೯೭೭೪ Agri News ಜಾನುವಾರುಗಳನ್ನು ಚಿಕಿತ್ಸಾ ಮಾಡಿದ್ದು ಅವುಗಲ್ಲಿ ಶೇ:೭೩.೫೪ ರಷ್ಟು ರಾಸುಗಳು ಗರ್ಭಧರಿಸಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
Date: