Wednesday, September 16, 2026
Wednesday, September 16, 2026

For Registration Movie ” ಫಾರ್ ರಿಜಿಸ್ಟ್ರೇಷನ್” ಸಿನಿಮಾ ಬಿಡುಗಡೆ- ಒಳ್ಳೇ ರೆಸ್ಪಾನ್ಸ್

Date:

For Registration Movie ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ನಟಿಸಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.

ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ರೋಮ್ಯಾಂಟಿಕ್ ಕಾಮಿಡಿ ಸಿನಿಮವಾಗಿದ್ದು, ನವೀನ್ ದ್ವಾರಕನಾಥ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಇನ್ನು ಸಿನಿಮಾವು ನಿಶ್ಚಲ್ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣಗೊಂಡಿದೆ. ರಿಜಿಸ್ಟ್ರೇಷನ್ ಸಿನಿಮಾದಲ್ಲಿ ಸಂಬಂಧಗಳ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದಲ್ಲಿ ಭಾವನಾತ್ಮಕ ಸಂಬಂಧಗಳ ಗಟ್ಟಿ ಎಳೆ ಕೂಡ ಇದೆ.

ದಂಪತಿ ಮದುವೆಗೆ ಮುಂಚೆ ಹಾಗೂ ಮದುವೆಯಾದ ನಂತರ ಎದುರಿಸುವಂತಹ ಸಮಸ್ಯೆಗಳನ್ನು ಕುರಿತು ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನವೀನ್ ದ್ವಾರಕನಾಥ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾವು ಅವರ ಚೊಚ್ಚಲ ಸಿನಿಮಾವಾಗಿದೆ.

ಗಂಡ ಹೆಂಡತಿಯ ನಡುವೆ ಕಮ್ಯೂನಿಕೇಶನ್ ಬಹಳ ಮುಖ್ಯ. ಅದು ಸರಿಯಾಗದೆ ಇದ್ದರೆ ಏನಿಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದರ ಜೊತೆಗೆ ಸ್ವಲ್ಪ ಹಾಸ್ಯ ಕೂಡ ಮಿಕ್ಸ್ ಆಗಿದೆ. ಸಿನಿಮಾದಲ್ಲಿ ಗಂಡ ಹೆಂಡತಿಯ ಜೊತೆ ಕುಟುಂಬದ ಮೌಲ್ಯವನ್ನು ಬಹಳ ನಾಜೂಕಾಗಿ ತೋರಿಸಿದ್ದಾರೆ. ಮಿಲನ ಹಾಗೂ ಪೃಥ್ವಿ ಅಂಬಾರ್ ಅವರು ಅನ್ವಿ, ಅಶು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

For Registration Movie ಇನ್ನು ಸಿನಿಮಾದಲ್ಲಿ ಸುಧಾ ಬೆಳವಾಡಿ, ರಮೇಶ್ ಭಟ್, ಸಿಹಿ ಕಹಿ ಚಂದ್ರು ಇನ್ನಿತರರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...