Tuesday, November 26, 2024
Tuesday, November 26, 2024

DC Shivamogga ಸಿನಿಮಾ/ಟೀವಿ ಧಾರಾವಾಹಿಗಳ ಪಾತ್ರಗಳಿಗೆ ಮಕ್ಕಳನ್ನ ಬಳಸಿಕೊಳ್ಳುವ ನಿರ್ಮಾಪಕರಿಗೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ

Date:

DC Shivamogga ಸಿನಿಮಾ ಇಲ್ಲವೇ ಧಾರವಾಹಿಗಳಲ್ಲಿ ಬಾಲ ನಟರು / ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಛಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ಈ ಕುರಿತಂತೆ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಪ್ರಕಟಣೆ ಬಿಡುಗಡೆ ಮಾಡಿದೆ. ಬಾಲ ಹಾಗೂ ಕಿಶೋರಾ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಕರ್ನಾಟಕ ನಿಯಮಗಳ 2 ಸಿ ರಲ್ಲಿ ಮಗು (1) ಕಲಂ 3 ರ ನಿಬಂಧನೆಗಳ ನಿಯಮಾನುಸಾರ, ಸಿನಿಮಾ ಇಲ್ಲವೇ ಧಾರವಾಹಿಗಳಲ್ಲಿ ಬಾಲ ನಟ – ನಟಿಯರ ಪಾತ್ರಕ್ಕೆ ಮಕ್ಕಳನ್ನು ಬಳಸಿಕೊಳ್ಳಲು ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದೆ.

ನಿಯಮ ಪಾಲನೆ ಕಡ್ಡಾಯ :
ಯಾವುದೇ ಮಗುವನ್ನು ಒಂದು ದಿನದಲ್ಲಿ 5 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಟನಾ ಕೆಲಸಕ್ಕೆ ನಿಯೋಜಿಸುವಂತಿಲ್ಲ ಮತ್ತು ವಿಶ್ರಾಂತಿ ಇಲ್ಲದೆ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸುರಕ್ಷತೆ ಮತ್ತು ಮಕ್ಕಳ ದುರುಪಯೋಗ ತಡೆ ಕುರಿತಾದ ಮಾನ್ಯತೆ ಪಡೆದ ಮಾರ್ಗಸೂಚಿಯನ್ವಯ ಮುಚ್ಚಳಿಕೆಯನ್ನು ಯೋಜಕರು ನೀಡಬೇಕು.

DC Shivamogga ಈ ರೀತಿಯ ಮಕ್ಕಳನ್ನು 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶ ಇರುವುದಿಲ್ಲ. ಮಗುವಿನ ರಕ್ಷಣೆಗೆ ಪ್ರತಿ 5 ಮಕ್ಕಳಿಗೆ ಓರ್ವರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸುವುದು ಹಾಗೂ ಕಾರ್ಯಕ್ರಮದಿಂದ ಬರುವ ಆದಾಯದಲ್ಲಿ ಕನಿಷ್ಠ ಶೇ.20% ರಷ್ಟು ಮಗುವಿನ ಹೆಸರಿಗೆ ನಿಶ್ಚಿತ ಠೇವಣಿ ಇಡಬೇಕು.
ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಮಕ್ಕಳನ್ನು ಬಳಸಿಕೊಂಡಲ್ಲಿ ಕಾನೂನು ಉಲ್ಲಂಘಿಸುವ ಸಿನಿಮಾ ಹಾಗೂ ಧಾರವಾಹಿ ಆಯೋಜಕರು / ನಿರ್ಮಾಪಕರು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ...