Friday, April 17, 2026
Friday, April 17, 2026

ಬೂಸ್ಟರ್ ಡೋಸ್ ನಿಂದ, ಓಮಿಕ್ರಾನ್ ವಿರುದ್ಧ ರಕ್ಷಣೆ ಸಾಧ್ಯ

Date:

ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ದ ಲಸಿಕೆಯ ಬೂಸ್ಟರ್ ಡೋಸ್ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ. ಓಮಿಕ್ರಾನ್ ಸೋಂಕು ಪರಿಣಾಮದ ವಿರುದ್ಧ ರಕ್ಷಣೆ ನೀಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೊರೋನಾ ರೂಪಾಂತರ ತಳಿಯ ಪರಿಣಾಮದ ತಡೆಗೆ ಬೂಸ್ಟರ್ ಸುಲಭವಾದ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ.

ಬ್ರಿಟನ್ ನ ಆರೋಗ್ಯ ಭದ್ರತಾ ಸಂಸ್ಥೆಯು , ‘ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಓಮಿಕ್ರಾನ್ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿದೆ. ಇದು ಓಮಿಕ್ರಾನ್ ನಿಂದ ಶೇ.70ರಷ್ಟು ರಕ್ಷಣೆ ನೀಡಲಿದೆ. ಕೋವಿಡ್ ನ ಯಾವುದೇ ಲಸಿಕೆಯ ಬೂಸ್ಟರ್ ಡೋಸ್ ನಿಂದ ನಿರೋಧಕ ಶಕ್ತಿ ಹೆಚ್ಚಿಸಲಿದೆ’ ಎಂದು ಹೇಳಿದೆ.

” ಬೂಸ್ಟರ್ ಡೋಸ್ ಅಗತ್ಯ. ಗಂಭೀರ ರೋಗದ ವಿರುದ್ಧ, 2 ಡೋಸ್ ಲಸಿಕೆಯು ಎಷ್ಟರ ಮಟ್ಟಿಗೆ ರಕ್ಷಣೆ ನೀಡುತ್ತದೆಯೋ, ತಿಳಿದಿಲ್ಲ ಎಂದು ಸೂಕ್ಷ್ಮ ರೋಗಾಣು ಡಾ. ಶಾಹಿದ್ ಜಮೀಲ್ ಅವರು ತಿಳಿಸಿದರು.

ಭಾರತದಲ್ಲಿ ಹೆಚ್ಚಿನವರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಈಗ ಒಂದು ಡೋಸ್ ಪಡೆದಿರುವವರು ಎರಡನೇಯ ಡೋಸ್ ಲಸಿಕೆಯನ್ನು 8ರಿಂದ 12 ವಾರಗಳ ಬದಲು, 12ರಿಂದ 16 ವಾರದ ಅಂತರದಲ್ಲಿ ಪಡೆಯಬೇಕು ಎಂದು ಸಲಹೆ ನೀಡಿದರು.

ಓಮಿಕ್ರಾನ್ ಸೋಂಕನ್ನು ಕೋವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಲಸಿಕೆಯು ಎಷ್ಟರಮಟ್ಟಿಗೆ ನಿಸ್ತೇಜ ಗೊಳಿಸಲಿದೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕು. ಬೂಸ್ಟರ್ ಲಸಿಕೆ ನೀಡುವ ಕುರಿತು ನೀತಿ ರೂಪಿಸಬೇಕು. ಯಾರು ಲಸಿಕೆ ಪಡೆಯಬೇಕು, ಯಾವಾಗ ಪಡೆಯಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕು. ಹದಿಹರೆಯದವರೂ ಒಳಗೊಂಡಂತೆ ಮಕ್ಕಳಿಗೆ ಲಸಿಕೆ ನೀಡಲು ಶೀಘ್ರ ಚಾಲನೆ ನೀಡಬೇಕು ಎಂದು ಡಾ.ಶಾಹಿದ್ ಜಮೀರ್ ಅವರು ತಿಳಿಸಿದರು.

ಬೂಸ್ಟರ್ ಡೋಸ್ ಆಗಿ ಕೋವ್ಯಾಕ್ಸಿನ್, ಕೋವಿಶೀಲ್ಡ್, ಎಸ್ ಐಐ ಸಂಸ್ಥೆಯ ಕೊವೊವ್ಯಾಕ್ಸ್, ಬಯೋಲಾಜಿಕಲ್ ಇ ಸಂಸ್ಥೆಯ ಕೋರ್ಬೇವ್ ಎಎಕ್ಸ್- ಇ ಲಸಿಕೆಗಳನ್ನು ಪರಿಗಣಿಸಬಹುದು ಎಂದು ಕೂಡ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Airport ಚನ್ನೈ ವಿಮಾನ ರದ್ದು. ಪ್ರಯಾಣಿಕರಿಗೆ ಚನ್ನೈಗೆ ‌ಕೊಂಡೊಯ್ಯಲು ಬಸ್ ವ್ಯವಸ್ಥೆ: ಜನರ ಆಕ್ರೋಶ

Shivamogga Airport ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಚೆನ್ನೈ ವಿಮಾನ ರದ್ದಾಗಿದ್ದು, ಪ್ರಯಾಣಿಕರು...

JCI Shivamogga ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ಅನಾಥ ಮಹಿಳೆಯರಿಗೆ ಭಾವನಾ ಜೆಸಿಐನಿಂದ ಉಡುಪು ವಿತರಣೆ

JCI Shivamogga ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಭಾವನದಿಂದ ಗುಡ್...

Brahmakumari Ishwariya University ಆಧ್ಯಾತ್ಮ , ಧ್ಯಾನ ಮತ್ತು ಯೋಗ ಮನುಷ್ಯನ ನೈಜ ಸಂಪತ್ತು-ಬ್ರಹ್ಮಕುಮಾರಿ ಸ್ವಾತಿ

Brahmakumari Ishwariya University ಒತ್ತಡ ಮತ್ತು ಅಶಾಂತಿಯ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರಿಗೆ...

Dr. B.R. Ambedkar ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ 19 ಜನಕ್ಕೆ ಜೀವ ವಿಮಾ ಬಾಂಡ್ ವಿತರಣೆ

Dr. B.R. Ambedkar ಶಿವಮೊಗ್ಗ ಜಿಲ್ಲೆಯ ಹೊಳೆ ಬೆನವಲ್ಲಿ ಗ್ರಾಮದಲ್ಲಿ ಸಂವಿಧಾನ...