Saturday, February 7, 2026
Saturday, February 7, 2026

ಬೆಳಗಾವಿ ಅಧಿವೇಶನ : ಸರ್ಕಾರಕ್ಕೆ ಅಗ್ನಿಪರೀಕ್ಷೆ

Date:

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ. ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿರುವ ವಿರೋಧ ಪಕ್ಷದ ನಾಯಕರು.

ಇಂದಿನಿಂದ ಆರಂಭವಾಗಿರುವ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಕಳೆದೆರಡು ವರ್ಷದಿಂದ ಕೋವಿಡ್ ಲಾಕ್ಡೌನ್ ನಿಂದಾಗಿ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿರಲಿಲ್ಲ. ಈ ಬಾರಿ ಕೋವಿಡ್-19, ಡೆಲ್ಟಾ ಮತ್ತು ಓಮಿಕ್ರಾನ್ ವೈರಸ್ ಹೆಚ್ಚಳದ ನಡುವೆಯೂ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಧಿವೇಶನ ನಡೆಸಲು ನಿರ್ಧರಿಸಿದೆ.

ಈ ಬಾರಿ ಅಧಿವೇಶನದಲ್ಲಿ ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಬಿಟ್ ಕಾಯಿನ್ ಪ್ರಕರಣ, 40 ಪರ್ಸೆಂಟೇಜ್ ಆರೋಪ, ಮಳೆ ಹಾನಿ, ಕೋವಿಡ್ ಪರಿಹಾರ ಕೊರತೆ, ನೀರಾವರಿ ಯೋಜನೆಗಳು ಮತ್ತು ರಸ್ತೆ ಮೂಲಸೌಕರ್ಯ ಸಮಸ್ಯೆಗಳ ಕುರಿತು ಪಂಚಾಸ್ತ್ರ ಪ್ರಯೋಗಿಸಲು ಸಿದ್ಧವಾಗಿವೆ.

“ಜನಪರ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದರಲ್ಲಿ ಯಾವುದೇ ಮುಲಾಜಿನ ಪ್ರಶ್ನೆ ಇಲ್ಲ ” ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ “ಅಭಿವೃದ್ಧಿ ಪರವಾಗಿ ಅರ್ಥಪೂರ್ಣವಾಗಿ ಚರ್ಚೆಯಾಗಬೇಕೆಂದು ಸರ್ಕಾರದ ಆಶಯವಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ambedkar Bhavan Shivamogga ಫೆಬ್ರವರಿ 14. ” ಹ್ಯಾಪಿ ಫೀಟ್- 2026″ ವಿಶೇಷ ನೃತ್ಯ ಪ್ರದರ್ಶನ

Ambedkar Bhavan Shivamogga ನೃತ್ಯಸಿರಿ ಡ್ಯಾನ್ಸ್ ಸ್ಟುಡಿಯೋ ವತಿಯಿಂದ “ಹ್ಯಾಪಿ ಫೀಟ್-2026”...

Dharmasthala Rural Development Project ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಾತ್ಸಲ್ಯ ಕಿಟ್ ವಿತರಣೆ

Dharmasthala Rural Development Project ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ...

ಕರವೇ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ...