Wednesday, September 16, 2026
Wednesday, September 16, 2026

Akashavani Bhadravathi ವಜ್ರ ಮಹೋತ್ಸವದ ಅಂಗಳದಲ್ಲಿ ಆಕಾಶವಾಣಿ ಭದ್ರಾವತಿ

Date:

Akashavani Bhadravathi ಭದ್ರಾವತಿ ಆಕಾಶವಾಣಿ ಕೇಂದ್ರ ಆರಂಭವಾಗಿ 59ವರ್ಷ ಮುಗಿದು ಇದೀಗ 60ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವಜ್ರ ಮಹೋತ್ಸವದ ಆರಂಭಕ್ಕೆ
ಚಾಲನೆಕೊಡುವ 59ನೇ ವಾರ್ಷಿಕೋತ್ಸವ ಈ ತಿಂಗಳ 7ರಂದು, ಬುಧವಾರ ಬೆಳಿಗ್ಗೆ 11 ಗಂಟೆಯಿ0ದ 12ಗಂಟೆಯವರೆಗೆ ನಡೆಯಲಿದೆ.

ಆಕಾಶವಾಣಿ ಭದ್ರಾವತಿಯ (ಕಾಗದನಗರ) ಆವರಣದಲ್ಲಿ ಕೇಳುಗರೊಂದಿಗೆ ವಜ್ರಮಹೋತ್ಸವ ಆರಂಭದ ಸಂಭ್ರಮಾಚರಣೆಗೆ ಮುನ್ನುಡಿ ಹಾಕುವ
ವಿಶೇಷ ಕಾರ್ಯಕ್ರಮವನ್ನು ನೇರಪ್ರಸಾರದೊಂದಿಗೆ ಆಯೋಜಿಸಲಾಗಿದೆ.

ಈ ಸಂಭ್ರಮಕ್ಕೆ ಮುನ್ನುಡಿ ಹಾಡಲು ಕೇಳುಗರ ಆಗಮನವನ್ನು
ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಅವರ
ಕುರಿತು ಪ್ರಸಾರವಾದ ಉಪನ್ಯಾಸ ಸರಣಿಯ ಪ್ರಶ್ನೆಗೆ ಸರಿ ಉತ್ತರ ನೀಡಿದ ಕೆಲ ಕೇಳುಗರಿಗೆ ಪ್ರಶಸ್ತಿಪತ್ರವನ್ನು ಕುವೆಂಪು ವಿ ವಿ ಯ ಕುಲಪತಿಗಳಾದ
ಪ್ರೊ.ಎಸ್. ವೆಂಕಟೇಶ ಅವರು ವಿತರಿಸಲಿದ್ದಾರೆ.

Akashavani Bhadravathi ವಜ್ರಮಹೋತ್ಸವ ವರ್ಷಾಚರಣೆಯ ಆರಂಭದ ಸಮಾರಂಭಕ್ಕೆ ತಮ್ಮ ಆಗಮನ ಹಾಗೂ ಉಪಸ್ಥಿತಿಯನ್ನು ಆಕಾಶವಾಣಿ
ಸಿಬ್ಬಂದಿವರ್ಗವು ಆದರದಿಂದ ಬಯಸುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...