Wednesday, October 2, 2024
Wednesday, October 2, 2024

Bungalow House Kid ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಮನೋಭಾವ ಬೆಳೆಸಿ – ಅ.ನ.ವಿಜಯೇಂದ್ರ ರಾವ್

Date:

Bungalow House Kid ಮಕ್ಕಳಿಗೆ ಬಾಲ್ಯದಿಂದಲೇ ಸಾಹಸ ಪ್ರವೃತಿಯನ್ನು ಕಲಿಸಬೇಕು. ಚಿಕ್ಕವರಿದ್ದಾಗ ಹಾಗೆ ಮಾಡಬೇಡ, ಅಲ್ಲಿಗೆ ಹೋಗಬೇಡ ಎನ್ನುವುದಕ್ಕಿಂತ ಸರಿಯಾದ ಮಾರ್ಗದಲ್ಲಿ ಧೈರ್ಯದಿಂದ ಮುನ್ನಡೆಯುವಂತೆ ಸಲಹೆ ನೀಡಬೇಕು ಎಂದು ಅ.ನ.ವಿಜಯೇಂದ್ರರಾವ್ ಹೇಳಿದರು.

ಶಿವಮೊಗ್ಗ ನಗರದ ಬಂಗ್ಲೋ ಹೌಸ್ ಕಿಡ್ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕ ಮಕ್ಕಳು ಪ್ರಾರ್ಥನೆ ಮಾಡುತ್ತಿರುವುದು, ಸ್ವಾಗತ ಮಾಡುತ್ತಿರುವುದು, ನಿರೂಪಣೆ ಮಾಡುತ್ತಿರುವುದು ಬಹಳ ಸಂತೋಷದ ಸಂಗತಿ ಎಂದು ತಿಳಿಸಿದರು.

ಮಕ್ಕಳು ಅತ್ಯಂತ ಉತ್ತಮವಾಗಿ ಸಂಸ್ಕೃತ ಶ್ಲೋಕ ಉಚ್ಚಾರಣೆ ಮಾಡುತ್ತಿದ್ದು, ಶಾಲೆಯಲ್ಲಿ ಕಲಿಸಿದ್ದನ್ನು ಮನೆಯಲ್ಲಿಯೂ ತಂದೆ ತಾಯಿ ಹೇಳಿಕೊಡಬೇಕು. ಭಾರತ ದೇಶದ ಸಂಸ್ಕೃತಿ ಪರಂಪರೆ ಉಳಿಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಎಸ್.ವಾಗೇಶ್ ಮಾತನಾಡಿ, ಈ ಶಾಲೆಯ ಶಿಕ್ಷಕರು ಬಹಳ ಶ್ರಮವಹಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸಿದ್ದಾರೆ.

ಅದನ್ನು ಮನೆಯಲ್ಲಿಯೂ ಮುಂದುವರಿಸಬೇಕು. ಇಂದಿನ ವಿದ್ಯಾಭ್ಯಾಸ ಕ್ರಮ ಬದಲಾಗಿದೆ, ಡಾಕ್ಟರ್, ಇಂಜಿನಿಯರ್ ಆಗಲೇಬೇಕೆಂದು ಓದಿಸಬೇಡಿ. ಅವರಿಗೆ ಆಸಕ್ತಿ ಇರುವ ಕಲೆಗೆ ಬೆಲೆ ಕೊಡಿ ಮುಂದೆ ಅತ್ಯುನ್ನತ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದರು.

Bungalow House Kid ಶಾಲೆಗೆ ಕಳುಹಿಸಿದ ಮಕ್ಕಳಿಗೆ ಶಿಕ್ಷಕರು ಬಹಳ ಕಷ್ಟ ಪಟ್ಟು ಹೇಳಿ ಕೊಡುತ್ತಾರೆ. ಎಲ್ಲರ ಬಗ್ಗೆ ಅವರಿಗೆ ತಿಳುವಳಿಕೆ ಇರುತ್ತದೆ. ಅಂತವರನ್ನು ಒಂದೇ ವರ್ಷಕ್ಕೆ ಬೇರೆ ಶಾಲೆಗೆ ಕಳುಹಿಸಿದರೆ, ಅಲ್ಲಿಯೂ ಕಲಿಸಲು ಸಮಯ ಬೇಕು. ಅರ್ಧಕ್ಕೆ ನಮ್ಮ ಪಾಠಗಳು ನಿಂತು ಹೋಗುತ್ತವೆ. ತಮ್ಮ ಅಕ್ಕ ಪಕ್ಕದವರಿಗೆ ತಿಳಿಹೇಳಿ ನಮ್ಮ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಂದರೆ, ಇನ್ನೂ ಹೆಚ್ಚಿನ ಶ್ರಮ ವಹಿಸಿ ಕಲಿಸುತ್ತೇವೆ ಎಂದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಅನೇಕ ಹಾಡುಗಳನ್ನು ಹಾಡಿ ರಂಜಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....