Saturday, October 17, 2026
Saturday, October 17, 2026

Dalit Conflict Committee ಮುಖಂಡನ ವಿನಾಕಾರಣ ಬಂಧನ, ಬಿಡುಗಡೆ ಬಗ್ಗೆ ದಸಂಸ ಜಿಲ್ಲಾ ಸಂಚಾಲಕರಿಂದ ಒತ್ತಾಯ

Date:

Dalit Conflict Committee ವಿನಾಕಾರಣ ಸುಳ್ಳು ಮೊಖದ್ದಮೆ ದಾಖಲಿಸಿ ದಸಂಸ ಮುಖಂಡನನ್ನು ಬಂಧಿಸಿರುವ ತರೀಕೆರೆ ವೃತ್ತ ನಿರೀಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಈ ವೇಳೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ರಾಮೇಗೌಡ ಎಂಬುವವರು ಚುನಾವಣಾ ದುರುದ್ದೇಶವಿಟ್ಟುಕೊಂಡು ಕ್ಷುಲ್ಲಕ ವಿಚಾರವಾಗಿ ರಾಮಚಂದ್ರ ಕುಟುಂಬದವರನ್ನು ಎತ್ತಿಕಟ್ಟಿ ಜಗಳ ಮಾಡಿಸಿದಲ್ಲದೇ ಮನೆಯಿಂದ ರಾಮಚಂದ್ರ ಅವರನ್ನು ಕರೆತಂದು ಹನ್ನೇರಡು ಮಂದಿಯಿoದ ತೀವ್ರ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ರಾಮಚಂದ್ರ ಜೀವ ರಕ್ಷಣೆಗಾಗಿ ಎದುರಿಸಲು ಬಂದವರ ವಿರುದ್ಧ ತಿರುಗಿಬಿದ್ದಿದ್ದು ಆ ಸಂದರ್ಭದಲ್ಲಿ ವ್ಯವ ಸ್ಥಿತವಾಗಿ ವೀಡಿಯೋ ಚಿತ್ರೀಕರಿಸಿ ರಾಮಚಂದ್ರರೇ ಕೊಲ್ಲಲು ಬಂದರೆoದು ದೂರು ದಾಖಲಿಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ತರೀಕೆರೆ ವೃತ್ತ ನಿರೀಕ್ಷಕ ವೀರೇಂದ್ರ ಕೈಜೋಡಿಸಿದ್ದು ರಾಮಚಂದ್ರರನ್ನು ಕರೆಯೊಯ್ದು ದೂರನ್ನು ದಾಖಲಿ ಸಿರುವುದಲ್ಲದೇ ಚಿಕಿತ್ಸೆಗೆ ಆಸ್ಪತ್ರೆ ಕೊಂಡೊಯ್ದುದೇ ತಡೆಹಿಡಿದಿದ್ದಾರೆ. ಇದಾದ ಬಳಿಕ ರಾಮಚಂದ್ರ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಇದಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಸಂಸ ಮುಖಂಡರ ಮೇಲೆ ಹಲ್ಲೆ ಮಾಡಿದವರ ವೀಡಿಯೋ ಇಟ್ಟು ಕೊಂಡು 307 ಕೇಸು ದಾಖಲಾಗಿದೆ ಎಂದು ಆಸ್ಪತ್ರೆಯ ವ್ಶೆದ್ಯರಿಗೆ ಒತ್ತಾಯಿಸಿ ಆಸ್ಪತ್ರೆಯಿಂದಲೇ ಬಂಧಿಸಿ ರುವುದು ಗಮನಿಸಿದರೆ ರಾಜಕೀಯ ಕೈಗೊಂಬೆಯoತೆ ರಾಮೇಗೌಡ ಜೊತೆ ಸೇರಿ ತರೀಕೆರೆ ವೃತ್ತ ನಿರೀಕ್ಷಕರು ಕೆಲಸ ಮಾಡು ತ್ತಿದ್ದಾರೆ ಎಂದು ದೂರಿದರು.

ಈ ರೀತಿ ಓರ್ವ ದಸಂಸ ಹೋರಾಟಗಾರರನ್ನು ಹತ್ತಿಕ್ಕುವ ದೃಷ್ಟಿಯಿಂದ ಬಂಧಿಸಿ ಸುಳ್ಳು ಕೇಸು ದಾಖಲಿಸಿ ರುವುದು ಸೂಕ್ತವಲ್ಲ. ಕೂಡಲೇ ರಾಮಚಂದ್ರರನ್ನು ಬಿಡುಗಡೆಗೊಳಿಸಬೇಕು. ವೃತ್ತ ನಿರೀಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Dalit Conflict Committee ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಎನ್.ಮಹೇಂದ್ರಸ್ವಾಮಿ, ಕಂಡಪ್ಪ, ಸಣ್ಣಪ್ಪ, ಖಜಾಂಚಿ ಸಂತೋಷ್ ಲಕ್ಯಾ, ತಾಲ್ಲೂಕು ಸಂಘಟನಾ ಸಂಚಾಲಕ ಮಂಜುನಾಥ್ ನಂಬಿಯಾರ್, ಮುಖಂಡರು ಗಳಾದ ಅಣ್ಣಪ್ಪ, ರಮೇಶ್, ಗಂಗಾಧರ್, ಬಸವರಾಜ್, ಭಾಗ್ಯ ರಾಮಚಂದ್ರ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...