Shimoga District Chamber of Commerce and Industry ಉದ್ಯಮ, ಆಹಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಅಗತ್ಯವಿದೆ ಎಂದು ಛಾಯಾ ದೇವಂಗಿ ಹೇಳಿದರು.
ಪಂಪ ನಗರದ ಗುತ್ತö್ಯಪ್ಪ ಕಾಲೋನಿಯಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಮಲೆನಾಡು ಮೇಳ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ ಎಂದು ತಿಳಿಸಿದರು.
Shimoga District Chamber of Commerce and Industry ಲಕ್ಷ್ಮೀ ಪುಟ್ಟಯ್ಯ ಹೆಗ್ಡೆ ಮಾತನಾಡಿ, ಇಂತಹ ಮೇಳಗಳ ಆಯೋಜನೆಯಿಂದ ಸಮಾಜದ ಎಲ್ಲರೊಂದಿಗೆ ಓಡನಾಟ ಸಂಪರ್ಕ ಹೆಚ್ಚಲಿದ್ದು, ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ಸಂಘದ ಅಧ್ಯಕ್ಷೆ ರಚನಾ ಸಂತೋಷ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮಲೆನಾಡು ಮೇಳ ಆಯೋಜಿಸಿದ್ದು, ಈ ಮೇಳದಲ್ಲಿ ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗು ಮಾಂಸಾಹಾರಿ ತಿನುಸುಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಸಾಧನೆ ಮಾಡುತ್ತಿದ್ದು, ಕುಟುಂಬ, ಸ್ನೇಹಿತ ವರ್ಗ ಹಾಗೂ ಎಲ್ಲರ ಸಹಕಾರದಿಂದ ಇನ್ನಷ್ಟು ಸಾಧನೆ ಮಾಡಬೇಕು ಎಂದು ಆಶಿಸಿದರು.
ಬೆಂಗಳೂರು, ಬೇಲೂರು, ಕೊಪ್ಪ, ಶೃಂಗೇರಿ, ಜಯಪುರ, ತರೀಕೆರೆ, ಭದ್ರಾವತಿ, ಸಾಗರ, ತೀರ್ಥಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಸ್ಟಾಲ್‌ಗಳನ್ನು ಹಾಕಿದ್ದರು. ಮನೆಯಲ್ಲಿ ತಯಾರಿಸಿದ ಹಿಟ್ಟು ಉಂಡೆ, ಹುಲ್ಲಿಂದ ತಯಾರಿಸಿದ ಬುಟ್ಟಿಗಳು, ಮನೆಯಲ್ಲಿ ತಯಾರಿಸಿದ ತಿಂಡಿಗಳು ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಸ್ಟಾಲ್‌ಗಳು ಇದ್ದವು.
ಕಾರ್ಯದರ್ಶಿ ರಂಜಿತಾ ಆದಿತ್ಯ, ಖಜಾಂಜಿ ಸುಪ್ರಿಯಾ ರಮೇಶ್, ಸುಪ್ರಿಯಾ ರಾಮಪ್ಪ, ಅಂಜು ಸುರೇಶ್, ಶೈಲಾ ವಾಸುದೇವ್, ಅರ್ಚನಾ, ಉಮಾ ಬಾಲರಾಜ್, ಕಲ್ಪನಾ, ಛಾಯಾ ಜಯಂತ್, ಪುಷ್ಪ ಹಾಗೂ ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.