Monday, April 21, 2025
Monday, April 21, 2025

District Commissioner Office chikkamagalur ಪ್ರಸ್ತಾಪಿತ 16 ಎಕರೆ ಜಮೀನನ್ನು ವಸತಿರಹಿತರಿಗೆ ನೀಡಲು ಎಎಪಿ ಮನವಿ

Date:

District Commissioner Office chikkamagalur

ಚಿಕ್ಕಮಗಳುರು, ತಾಲ್ಲೂಕಿನ ಗವನಹಳ್ಳಿ ಸಮೀಪವಿರುವ ಸುಮಾರು 16 ಎಕರೆ ಭೂಮಿ ಮಂಜೂರುದಾರರಿಗೆ ಜಮೀನು ಮಾರಾಟ ನಡೆಸಲು ಅವಕಾಶ ನೀಡದೇ ವಸತಿರಹಿತ ಬಡ ಕುಟುಂಬಗಳಿಗೆ ಕಾಯ್ದಿರಿಸಬೇಕು ಎಂದು ಎಎಪಿ ಮುಖಂಡರು ಮಂಗಳವಾರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಈ ಸಂಬoಧ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದ ಎಎಪಿ ಮುಖಂಡರುಗಳು ಪಂಚಾ ಯಿತಿ ವ್ಯಾಪ್ತಿಯಲ್ಲಿ ಹಲವಾರು ಮಂದಿ ನಿವೇಶನ ರಹಿತರಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಸಮರ್ಪಕವಾಗಿ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಮುಖಂಡರುಗಳು 1978 ರಲ್ಲೇ ಭೂಮಿ ಮಂಜೂರು ಮಾಡಿಸಿಕೊಂಡಿ ರುವವರು ಕೃಷಿ ಚಟುವಟಿಕೆ ಅಥವಾ ಜೀವನೋಪಾಯಕ್ಕೆ ಬಳಸಿಕೊಳ್ಳಬೇಕು ಎಂದಿದೆ. ಆದರೆ ಮಂಜೂರುದಾ ರರು ಇದನ್ನು ಹೊರತುಪಡಿಸಿ ನಿರಂತರವಾಗಿ ಇತರರಿಂದ ಹಣ ಪಡೆದುಕೊಂಡು ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ 2008ರಲ್ಲಿ ಉಪವಿಭಾಗಾಧಿಕಾರಿ ದಯಾನಂದ್ ಅವರು ಪರಿಶೀಲನೆ ನಡೆಸಿ ಮಂಜೂರಾತಿ ಉದ್ದೇಶ ಪಾಲಿಸದಿರುವುದರಿಂದ ಹಾಗೂ ಸ್ವಾಧೀನಾನುಭವನದಲ್ಲಿ ಇಲ್ಲದ ಕಾರಣ ನೀಡಿ ಜಮೀನಿನ ಮಂಜೂರಾತಿಯನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ರದ್ದುಗೊಳಿಸಿ ಶಿಫಾರಸ್ಸಿನ ಕಡಿತ ಹಿಂದಿರುಗಿಸಲಾಗಿದೆ ಎಂದು ಹೇಳಿದರು.

ಆದರೆ ಪುನಃ ಅದೇ ಫಲಾನುಭವಿಗಳು ಖಾಸಗೀ ವ್ಯಕ್ತಿಗಳಿಗೆ ವ್ಯಾಪಾರ ಒಪ್ಪಂದ ಮುಂದುವರೆಸಿ ನಾಲ್ಕು ದಶಕಗಳ ನಂತರ ಗೈರುವಿಲೆ ಭೂಮಾಫಿಯಾದ ಕಡತವನ್ನು ತಯಾರಿಸಿ ಮಾರಾಟಕ್ಕೆ ಮುಂದಾಗಿದೆ. ಅದಲ್ಲದೇ ಭೂಮಿ ಮಂಜೂರುದಾರುಗಳು ಹಣದ ಆಸೆಗಾಗಿ ಮಾರಾಟಕ್ಕೆ ಮುಂದಾಗಿರುವ ದೌರ್ಬಲ್ಯವನ್ನು ಬಳಸಿಕೊಂಡು ಕೆಲವು ಭೂಮಾಫಿಯಾ ವ್ಯಕ್ತಿಗಳು ಪಕ್ಕದ ಸರ್ಕಾರಿ ಜಾಗವನ್ನು ಕಬಳಿಸಲು ಸಂಚು ರೂಪಿಸಿದೆ ಎಂದರು.

ಜಮೀನಿನ ಪ್ರದೇಶವು ನಗರಕ್ಕೆ ಸಮೀಪವಿರುವ ಹಾಗೂ ವಸತಿ ಬಡಾವಣೆಗೆ ಸೂಕ್ತವಾಗಿರುವುದರಿಂದ ನಗರ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ಜಾಗ ಕಾಯ್ದಿರಿಸಿದರೆ ನೂರಾರು ಬಡ ಕುಟುಂಬ ಗಳಿಗೆ ಬಹಳಷ್ಟು ಅನುಕೂಲವಾಗಲಿದ್ದು ಸರ್ವೆ ನಂ.92ರ 16 ಎಕರೆ ಪ್ರದೇಶವನ್ನು ರಾಜೀವ್‌ಗಾಂಧಿ ವಸತಿ ನಿಗಮದಿಂದ ಹಣ ಪಾವತಿಸುವ ಮೂಲಕ ಬಡವರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

District Commissioner Office chikkamagalurಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಎಎಪಿ ಮಾಧ್ಯಮ ಪ್ರತಿನಿಧಿ ಡಾ.ಕೆ.ಸುಂದರಗೌಡ, ಕಾರ್ಯದರ್ಶಿ ಎಂ.ಪಿ.ಈರೇಗೌಡ, ಮುಖಂಡ ಸುನೀಲ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...