Thursday, October 3, 2024
Thursday, October 3, 2024

Voter Awareness Programme ವಿದ್ಯುನ್ಮಾನ ಯಂತ್ರಗಳ ಬಳಕೆ & ನಿಖರತೆ ತಿಳಿಸಲು ಮತದಾರರ ಜಾಗೃತಿ ಕಾರ್ಯಕ್ರಮ

Date:

Voter Awareness Programme ಮತದಾರರ ಜಾಗೃತಿ ಮತ್ತು ಇವಿಎಂ ಮಷಿನ್‍ಗಳ ಪ್ರಾತ್ಯಕ್ಷಿಕೆಗಾಗಿ ತಯಾರಿಸಲಾದ ಎಂಡಿವಿ ಮೊಬೈಲ್ ಡೆಮಾನ್ಸ್‍ಟ್ರೇಷನ್ ವಾಹನಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ
ಡಾ. ಸೆಲ್ವಮಣಿ ಆರ್ ಇವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ವಿದ್ಯುನ್ಮಾನ ಯಂತ್ರಗಳ ಬಳಕೆ ಮತ್ತು ನಿಖರತೆ ಬಗ್ಗೆ ತಿಳಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ನಗರ ಮತ್ತು ಹಳ್ಳಿಗಳ ಎಲ್ಲ ಮತದಾರರಿಗೆ ಈ ಸಂಚಾರಿ ವಾಹನ ತಲುಪಲಿದ್ದು, ಮಹಾನಗರಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ 113 ಕ್ಷೇತ್ರದ ಎಲ್ಲ ಮತಗಟ್ಟೆಗಳಿಗೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಲಿದೆ.

Voter Awareness Programme ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾದ ಸ್ನೇಹಲ್ ಸುಧಾಕರ್ ಲೋಖಂಡೆ, ಮಹಾನಗರಪಾಲಿಕೆಯ ಆಫೀಸ್ ಅಡ್ಮಿನ್ ತುಷಾರ್, ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮ್ಮದ್ ಫರ್ವೀಜ್, ಎ ಡಿ ಆದ ಸುಪ್ರಿಯ ಮತ್ತು ಅಧಿಕಾರಿಗಳು ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...

Navaratri Festival ಬಂಗಾರಮಕ್ಕಿಯಲ್ಲಿ ಶರನ್ನವರಾತ್ರಿ ಉತ್ಸವ

Navaratri Festival ಬಂಗಾರಮಕ್ಕಿಯ ಹೇಮಪುರ ಮಹಾಪೀಠದ ಶ್ರೀ ವಿಶ್ವ ವೀರಾಂಜನೇಯ...

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...