Thursday, December 18, 2025
Thursday, December 18, 2025

Scouts and Guides ಉದ್ಯಮ ಮತ್ತು ಜಿಲ್ಲಾ ಸ್ಕೌಟ್ ಕ್ಷೇತ್ರದಲ್ಲಿ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಹೆಸರು ಅಜರಾಮರ- ಎಚ್.ಡಿ.ರಮೇಶ್ ಶಾಸ್ತ್ರಿ

Date:

Scouts and Guides ಸ್ಕೌಟ್ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದವರು, ಟಿ.ವಿ.ನಾರಾಯಣ ಶಾಸ್ತ್ರಿ, ಸಾಮಾಜಿಕ ಸೇವಾ ಕ್ಷೇತ್ರಕ್ಕೂ ಟಿ.ವಿ.ನಾರಾಯಣಶಾಸ್ತ್ರಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಪ್ರಧಾನ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಹೇಳಿದರು.

ಟಿ.ವಿ.ನಾರಾಯಣಶಾಸ್ತ್ರಿ 99ನೇ ಜನ್ಮದಿನ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸ್ತ್ರಿ ನೇತೃತ್ವದಲ್ಲಿ 1987ರಲ್ಲಿ ನಡೆದ 19ನೇ ಕರ್ನಾಟಕ ರಾಜ್ಯ ಜಂಬೂರೇಟ್, ಪ್ರಥಮ ದಕ್ಷಿಣ ಭಾರತ ರಿಜಿನಲ್ ಜಂಬೂರೀ ಮತ್ತು ರಾಷ್ಟ್ರೀಯ ಭಾವೈಕ್ಯತ ಶಿಬಿರ ಅತ್ಯಂತ ಯಶಸ್ವಿಯಾಗಿತ್ತು ಎಂದು ತಿಳಿಸಿದರು.

ಟಿ.ವಿ.ನಾರಾಯಣಶಾಸ್ತ್ರಿ ಮಾರ್ಗದರ್ಶನದಲ್ಲಿ 21ನೇ ಕರ್ನಾಟಕ ರಾಜ್ಯ ಕಬ್ ಮತ್ತು ಬುಲ್ ಉತ್ಸವವನ್ನು ಆಯೋಜಿಸಿ ಎಲ್ಲಾ ಮಕ್ಕಳಿಗೂ ಜೋಗಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅವರ ಅವಧಿಯಲ್ಲಿ 10 ಮೂಲ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. 2008 ರಲ್ಲಿ ಜಿಲ್ಲಾ ರ‍್ಯಾಲಿ ಹಮ್ಮಿಕೊಂಡು 2000 ಮಕ್ಕಳು ಭಾಗವಹಿಸಿದ್ದರು ಎಂದರು.

ಶಾಸ್ತ್ರಿ ಅವರ ನಿಸ್ವಾರ್ಥ ಸೇವೆ ಪರಿಗಣಿಸಿ ರಾಷ್ಟ್ರೀಯ ಮುಖ್ಯಾಲಯ 2002ರಲ್ಲಿ ಸಂಸ್ಥೆಯ ಅತ್ಯುನ್ನತ ಪ್ರಶಸ್ತಿಯಾದ ” ಬೆಳ್ಳಿ ಆನೆ ” ಪ್ರಶಸ್ತಿ ನೀಡಿ ಗೌರವಿಸಿದೆ. ಸ್ಕೌಟ್ ಚಳುವಳಿ ಮಾತ್ರವಲ್ಲದೇ ಕೈಗಾರಿಕಾ ಕ್ಷೇತ್ರದಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಬಹಳಷ್ಟು ಜನರಿಗೆ ಸ್ವಂತ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೇರಕ ಶಕ್ತಿ ಯಾಗಿದ್ದರು ಎಂದು ಹೇಳಿದರು.

ಕೈಗಾರಿಕಾ ಸೇವೆಗಾಗಿ ಅಂದಿನ ಉಪರಾಷ್ಟ್ರಪತಿ ಬಿ ಡಿ ಜತ್ತಿ ರವರಿಂದ ಪ್ರಶಸ್ತಿ ಪಡೆದರು. ಭಾರತ ಸರ್ಕಾರದ ಉದ್ಯೋಗ ರತ್ನ ಪ್ರಶಸ್ತಿ ಸಹ ಪಡೆದರು. ಸ್ಕೌಟ್ ಚಳವಳಿ, ಕೈಗಾರಿಕಾ ಕ್ಷೇತ್ರ ವಲ್ಲದೆ ಆಧ್ಯಾತ್ಮಿಕ ಕ್ಷೇತ್ರ ದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

Scouts and Guides ಶಿವಮೊಗ್ಗ ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಶ್ರೀಯುತರು ಸೇವೆ ಸಲ್ಲಿಸಿದ್ದಾರೆ. ಸಿಟಿ ಕ್ಲಬ್ ಉಪಾಧ್ಯಕ್ಷ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ, ಜಿಲ್ಲಾ ಕೈಗಾರಿಕ ಸಂಘದ ಅಧ್ಯಕ್ಷ, ಗಾರೇಜ್ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ, ಮಾಚೇನಹಳ್ಳಿ ಕೈಗಾರಿಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದರು.

ಇ.ಪರಮೇಶ್ವರ್, ಶಕುಂತಲಾ ಚಂದ್ರಶೇಖರ್, ಜಿ.ವಿಜಯಕುಮಾರ್, ಭಾರತಿ ಡಯಾಸ್, ಶಿವಶಂಕರ್, ಗೀತಾ ಚಿಕಮಠ್, ರಾಘವೇಂದ್ರ, ದೇವಪ್ಪ, ಚಂದ್ರಶೇಖರ್, ವಿಜಯ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...