Kannada literature Council ಕನ್ನಡ ಭಾಷೆ ವಿಶ್ವ ಲಿಪಿಗಳ ರಾಣಿಯಾಗಿದೆ.ಆಧುನಿಕ ಹಾಗೂ ನವೋದಯ ಸಾಹಿತ್ಯ ಸಂದರ್ಭದಲ್ಲಿ
ಹೆಚ್ಚು ಪ್ರಚಲಿತಕ್ಕೆ ಬಂದ ಮಕ್ಕಳ ಸಾಹಿತ್ಯದ ಮೂಲ
ಬೇರುಗಳಾದ ವಚನ, ಕಿರ್ತನ ಹಾಗೂ ಜಾನಪದ ಸಾಹಿತ್ಯದ
ಪರಂಪರೆಯ ಪುಸ್ತಕಗಳನ್ನು ಓದುವ ಅಗತ್ಯವಿದೆ ಎಂದು
ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಾಕ್ಷ ಆರ್.
ವೈಷ್ಣವಿ ಅವರು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಸಾಂಕೃತಿಕ ವೇದಿಕೆ, ಕನ್ನಡ ಸಾಹಿತ್ಯ
ಪರಿಷತ್, ಕರ್ನಾಟಕ ಜಾನಪದ ಪರಿಷತ್ ಸೊರಬ
ಹಾಗೂ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನಿಯಲ್
ಸ್ಕೂಲ್ ಕೋಟಿಪುರ ಇವರ ಸಹಯೋಗದಲ್ಲಿ ಸೊರಬ ತಾಲೂಕಿನ
ಆನವಟ್ಟಿಯ ಕೋಟಿಪುರ ಎವರಾನ್ ಇಂಟರ್‌ನ್ಯಾಷನಲ್
ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ
ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಾಕ್ಷತೆ ವಹಿಸಿ
ಅವರು ಮಾತನಾಡಿದರು.
Kannada literature Council ಪ್ರಸ್ತುತ ಮಕ್ಕಳನ್ನು ವಶಪಡಿಸಿಕೊಳ್ಳುವ ಜಂಗಮವಾಣಿ
(ಮೊಬೈಲ್) ಯಿಂದ ಹೊರತಂದು ಪುಸ್ತಕಗಳ ಕಡೆಗೆ
ಮುಖಮಾಡುವಂತೆ ಮಾಡಬೇಕಾದ ಅನಿವಾರ್ಯತೆಯಲ್ಲಿ
ನಾವಿದ್ದೇವೆ. ಋಣಾತ್ಮಕ ಅಂಶಗಳ ಕಡೆಗೆ ಆಕರ್ಷಿತರಾಗಿ
ಮಾಡಬೇಕಿದೆ. ಇದಕ್ಕೆ ಇಂತಹ ಸಮ್ಮೇಳನಗಳು ಸ್ಫೂರ್ತಿ
ಕೋಟಿಪುರ ಕೈಟಚೇಶ್ವರ ದೇವಾಲಯದಿಂದ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್‌ನ
ವೇದಿಕೆವರಗೆ ಸಮ್ಮೇಳನದಕ್ಷೆ ಆರ್. ವೈಷ್ಣವಿ ಅವರನ್ನು ವಿವಿಧ ಕಲಾ ಮೇಳಗಳೊಂದೆ ಮೇರವಣಿಗೆ ತರಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಪಾಣಿ, ಕರ್ಮಾಟಕ
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್, ಬಸವನಗೌಡ, ಖಲಂದರ ಸಾಭ್, ಮಾಲತೇಶ್
ಹೆಗಡಿಕಟ್ಟಿ, ನಾಗರಾಜ್ ಗುತ್ತಿ, ಚರಿತಾ ಕಾರ್ತಿಕ್, ಸುನೀತಾ ವಿಜಯ ಪ್ರಸಾದ್, ರೇಣುಕಮ್ಮಗೌಳಿ, ಸಂತೋಷ್
ಕುಮಾರ್, ಟಿ.ಪಿ ಅಜಿತ್‌ಕುಮಾರ್, ಹೆಚ್,ಸತೀಶ್ ಅಭಿಲಾಶ್ ಹುರಳಿಕೊಪ್ಪ, ಬಿ. ರಮೇಶ್, ಕೃಷ್ಣನಂದ,
ಕೈಲಾಶ ಭಗವಾನ್, ಶಾಲಾ ಮಕ್ಕಳು ಸಿಬ್ಬಂದಿಗಳು ಉಪಸ್ಥಿತರಿದ್ದರು.