Friday, September 25, 2026
Friday, September 25, 2026

Parliament winter Session ಲೋಕಸಭೆ & ರಾಜ್ಯಸಭೆ ಸೇರಿದಂತೆ ಒಟ್ಟು 78 ಸಂಸದರ ಅಮಾನತು

Date:

Parliament winter Session ಚಳಿಗಾಲದ ಸಂಸತ್ ಅಧಿವೇಶನವು ಸಂಸದರ ಅಮಾನತಿನಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 78 ಸಂಸದರನ್ನು ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.

ಲೋಕಸಭೆಯ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಟಿ.ಆ‌ರ್.ಬಾಲು, ಎ.ರಾಜಾ, ದಯಾನಿಧಿ ಮಾರನ್.
ರಾಜ್ಯಸಭೆ: ಕೆ.ಸಿ. ವೇಣುಗೋಪಾಲ್‌, ಸಯ್ಯದ್ ನಾಸಿರ್ ಹುಸೇನ್, ಜೈರಾಮ್ ರಮೇಶ್, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಅಮಾನತುಗೊಂಡ ಪ್ರಮುಖರಾಗಿದ್ದಾರೆ.

ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಗದ್ದಲ ಎಬ್ಬಿಸಿದ್ದರು.

ಸ್ಪೀಕರ್ ಮತ್ತು ಸಭಾಪತಿಗಳು ಎಷ್ಟೇ ತಿಳಿ ಹೇಳಿದರೂ ವಿಪಕ್ಷಗಳು ತೀವ್ರ ಹೋರಾಟ ನಡೆಸುತ್ತಿದ್ದರು. ಫಲಕಗಳನ್ನು ಸದನದೊಳಗೆ ತರಕೂಡದು ಎಂಬ ನಿಯಮವಿದ್ದರೂ, ಉಲ್ಲಂಘಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಲಾಗುತ್ತಿತ್ತು.

Parliament winter Session ಈ ಹಿನ್ನೆಲೆಯಲ್ಲಿ ಸ್ಪೀಕರ್ ಪೀಠದ ವೇದಿಕೆಗೂ ಕೆಲ ಸಂಸದರು ನುಗ್ಗಿ ಅವಮಾನ, ದುರ್ನಡತೆ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಡಿಸೆಂಬರ್ 18 ರಂದು ಲೋಕಸಭೆಯಲ್ಲಿ 33 ಸಂಸದರು ಮತ್ತು ರಾಜ್ಯಸಭೆಯಲ್ಲಿ 45 ಜನರನ್ನು ಏಕಕಾಲಕ್ಕೆ ಅಮಾನತು ಮಾಡಿ ಆದೇಶಿಸಲಾಗಿದೆ.

ಒಟ್ಟಾರೆ 92 ಸಂಸದರನ್ನು ಈವರೆಗೂ ಶಿಕ್ಷೆಗೆ ಗುರಿಪಡಿಸಿ, ಅಧಿವೇಶನ ಮುಗಿಯುವವರೆಗೂ ಸದನಕ್ಕೆ ಬರಕೂಡದು ಎಂದು ಸೂಚಿಸಲಾಗಿದೆ. ಇದು ಸಂಸತ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...