Defense Research and Development Organisation ಚಳ್ಳಕೆರೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಮಹತ್ವದ ಸಾಧನೆ ಮಾಡಿದ್ದು, ಈ ಮೂಲಕ ಜಗತ್ತಿನ ಗಣ್ಯ ರಾಷ್ಟ್ರಗಳ ಪಾಲಿಗೆ ಸೇರ್ಪಡೆಯಾಗಿದೆ.
ಇಂಥದ್ದೊಂದು ಸಾಧನೆ ಸಾಧ್ಯವಾಗಿರುವುದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಎನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ DRDO ಪ್ರಾಂಗಣದ ಏರೋನಾಟಿಕಲ್ ಟೆಸ್ಟ್ ರೇಂಜ್(ATR)ನಲ್ಲಿ ಬಾಲರಹಿತವಾಗಿ, ರೆಕ್ಕೆಯ ತಂತ್ರಜ್ಞಾನದಿಂದಲೇ ಹಾರಾಟ ಮಾಡುವ ಫ್ಲೈಟ್‍ನ ಪ್ರಯೋಗ ಇದಾಗಿದೆ.
ಈ ಬಗ್ಗೆ ಎಕ್ಸ್(ಟ್ವಿಟರ್)ನಲ್ಲಿ DRDO ವೀಡಿಯೋ ಸಮೇತ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಸ್ವಿಫ್ಟ್ ಎನ್ನುವ ಹೆಸರಿನ ಫ್ಲೈಟ್ ಯಶಸ್ವಿ ಹಾರಾಟ ಮಾಡಿರುವ 16 ಸೆಕೆಂಡುಗಳ ವೀಡಿಯೋ ಶೇರ್ ಮಾಡಿದೆ.
ಗುರುವಾರ ನಸುಕಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಶುಕ್ರವಾರ ಸಂಜೆ ಡಿಆರ್‍ಡಿಓ ಅಧಿಕೃತವಾಗಿ ಪ್ರಕಟಿಸಿದೆ.
ಆಟೋನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‍ಸ್ಟ್ರೇಟರ್ ಪ್ರಯೋಗ ಮಾಡಿದ್ದು, ಬಾಲ ರಹಿತ ಸಂರಚನೆಯಲ್ಲಿ ಫ್ಲೈಟ್ ಸ್ವತಂತ್ರವಾಗಿ ಹಾರಾಟ ನಡೆಸಿದೆ.
Defense Research and Development Organisation ಈ ಮೂಲಕ ಫ್ಲೈಯಿಂಗ್ ವಿಂಗ್ ಕಾನ್ಫಿಗರೇಷನ್ ಕರಗತ ಮಾಡಿಕೊಂಡ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಇಂತಹ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಭಾರತದ ಪ್ರಮುಖ ಐದು ದೇಶಗಳ ಪಟ್ಟಿಗೆ ಭಾರತವೂ ಸೇರಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
DRDO ಅಭಿವೃದ್ಧಿಪಡಿಸುತ್ತಿರುವ ಹೊಸ ಹೊಸ ತಂತ್ರಜ್ಞಾನಗಳು ದೇಶವನ್ನು ಜಗತ್ತಿನ ಮುಂದೆ ಎದೆಯುಬ್ಬಿಸಿ ನಡೆಯುವಂತೆ ಮಾಡಿವೆ. ಒಂದು ಕಾಲಕ್ಕೆ ಅಮೇರಿಕಾದಂತಹ ದೇಶಗಳು ಈ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಹಿಂದೆ ಮುಂದೆ ನೋಡಿದ್ದರು.
ಆದರೆ, ಈಗ ಭಾರತದ ವಿಜ್ಞಾನಿಗಳು, ಇಂಜಿನಿಯರ್‍ಗಳು ಸ್ವದೇಶಿಯಾಗಿಯೇ ಈ ಫ್ಲೈಟ್ ತಯಾರಿಸಿದ್ದಾರೆ.
ಈ ಫ್ಲೈಟ್‍ನ ಮತ್ತಷ್ಟು ವಿಶೇಷಗಳು ಸೇರಿದಂತೆ ಪ್ರಮುಖ ಮಾಹಿತಿಗಳು ಇನ್ನೂ ಲಭ್ಯವಾಗಬೇಕಿದೆ.