Thursday, February 5, 2026
Thursday, February 5, 2026

Delhi International School ಶಿಕ್ಷಣ ಕ್ಷೇತ್ರದ ಎಲ್ಲಾ ಜವಾಬ್ದಾರಿಗಳ ನಿರ್ವಹಣೆ ಸುಲಭವಲ್ಲ-ಜಗದೀಶ್ ಗೌಡ

Date:

Delhi International School ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ಜವಾಬ್ದಾರಿಯನ್ನು ಹೊತ್ತು ಕಾರ್ಯ ನಿರ್ವಹಿಸುವುದು ಸುಲಭದ ಮಾತಲ್ಲ. ಉತ್ತಮ ಸ್ಥಾನಕ್ಕೇರಲು ಸಾಕಷ್ಟು ಶ್ರಮ ಮತ್ತು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗದ ಬಿಇಓ ನಾಗರಾಜ್ ಅವರ ಸೇವೆ ನಿಜಕ್ಕೂ ಸಾರ್ಥಕ ವಾದುದು ಎಂದು ದೆಹಲಿ ಇಂಟರ್ ನ್ಯಾಷನಲ್ ಶಾಲೆಯ ಫೌಂಡರ್ ಡೈರೆಕ್ಟರ್ ಜಗದೀಶ್‌ಗೌಡ ತಿಳಿಸಿದರು.

ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು ಶಿಕ್ಷಣಕ್ಕಾಗಿ ನೀಡಿದ ಕೊಡುಗೆಯನ್ನು ಪರಿಗಣ ಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರವರಿಂದ ರಾಷ್ಟç ಪ್ರಶಸ್ತಿ ಸ್ವೀಕರಿಸಿದ ಈ ಸುಸಂದರ್ಭದಲ್ಲಿ ದೆಹಲಿ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅಭಿನಂದಿಸಿ ಮಾತನಾಡಿದರು.

Delhi International School ಶಿವಮೊಗ್ಗ ಜಿಲ್ಲೆಯಲ್ಲೇ ಅಚ್ಚುಮೆಚ್ಚಿನ ಬಿಇಓ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ಅವರು ಜಿಲ್ಲೆಯ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಯಾರೇ ಬಂದರು ಕಛೇರಿಯಲ್ಲಿ ವಿಶೇಷ ಗೌರವ ನೀಡಿ, ಸಾಕಷ್ಟು ಮಾಹಿತಿಗಳನ್ನು ನೀಡು ವಂತಹ ವಾತಾವರಣವನ್ನು ತಮ್ಮ ಕಛೇರಿಯಲ್ಲಿ ನಿರ್ಮಿಸಿದ್ದಾರೆ. ಯಾವ ಕಾರ್ಯಕ್ರಮದಲ್ಲಿ ಆಗಲಿ ಶಾಲಾ ಮಕ್ಕಳಿಗೆ ಸಾಕಷ್ಟು ವಿಚಾರಗಳನ್ನು ತಿಳಿಸಿ ಪ್ರೋತ್ಸಾಹಿಸುತ್ತಾರೆೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಡಾ. ಬಸವರಾಜಪ್ಪ ಎಂ., ಮೋಹನ ಡಿ., ಮುಸ್ತ ಫೀಜುಲ್ ಹಸನ್, ಹಾಜರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...