Friday, April 18, 2025
Friday, April 18, 2025

Aam Admi Party ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ನೀಡಿದ ಜನಪರ ಉಚಿತ ಯೋಜನೆಗಳನ್ನ ರಾಜ್ಯದಲ್ಲಿ ಕಾಂಗ್ರೆಸ್ ನಕಲಿಸಿದೆ- ಮುಖ್ಯಮಂತ್ರಿ ಚಂದ್ರು

Date:

Aam Admi Party ಹಳ್ಳಿಗಳಲ್ಲಿ ಮೂಲಸೌಕರ್ಯಗಳಿಲ್ಲದೇ ಜನರು ಶೋಚನೀಯ ಸ್ಥಿತಿಯ ಲ್ಲಿದ್ದು ಜನಸಾಮಾನ್ಯರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಸಮಾಜದಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಸಖರಾಯಪಟ್ಟಣ ಸಮೀಪದ ಹುಲೀಕೆರೆ ಗ್ರಾಮದಲ್ಲಿ ಪಕ್ಷದ ವತಿಯಿಂದ ಬುಧವಾರ ಆಯೋಜಿಸಿದ್ದ ಅರಳೀಕಟ್ಟೆ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲಿದ್ದು ಪ್ರಥಮ ಬಾರಿ ಶಾಸಕರಾಗುವ ವ್ಯಕ್ತಿ 10 ಲಕ್ಷ ಆಧಾಯ ಹೊಂದಿದ್ದರೆ ಮುಂದಿನ ವರ್ಷಕ್ಕೆ ಹತ್ತುಪಟ್ಟು ಏರಲಿದೆ. ಈ ಸ್ಥಿತಿಯಲ್ಲಿ ನಾಯಕರುಗಳು ಮುಂ ದುವರೆದರೆ ರಾಜ್ಯದ ಗತಿಯೇನು. ಆ ನಿಟ್ಟಿನಲ್ಲಿ ಪ್ರತಿ ಮತದಾರರು ಎಚ್ಚೆತ್ತುಕೊಳ್ಳಬೇಕು. ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ವ್ಯವಸ್ಥೆ ಸರಿಯಿದೆ ಎಂಬುದನ್ನು ಅರ್ಥೈಸಿಕೊಂಡು ಗ್ರಾ.ಪಂ. ಸದಸ್ಯರನ್ನು ಆಯ್ಕೆ ಮಾಡಬೇಕು ಎಂದರು.
ಹೊಸದಿಲ್ಲಿಯಲ್ಲಿ ಎಎಪಿ ನೀಡಿದ ಜನಪರ ಉಚಿತ ಸೌಲಭ್ಯಗಳನ್ನೇ ಕರ್ನಾಟಕದಲ್ಲಿ ಕಾಂಗ್ರೆಸ್ ನಕಲಿಸಿದೆ. ರಾಜ್ಯದ ಬಿಜೆಪಿಯ ೪೦% ರಾಜಕಾರಣ ಕಾಂಗ್ರೆಸ್ಸಿಗೂ ವಿಸ್ತರಿಸಿಕೊಂಡಿದೆ. ಶಿಕ್ಷಣ ಮತ್ತು ಆರೋಗ್ಯ ಮೂಲೆಗುಂ ಪಾಗಿದೆ. ಎಎಪಿ ಪಕ್ಷ ಎಲ್ಲವನ್ನು ಬದಲಾಯಿಸುತ್ತದೆ ಎಂದಲ್ಲ, ಹಂತ ಹಂತವಾಗಿ ಪೊರಕೆಯಿಂದ ಗುಡಿಸುತ್ತಾ ಭ್ರಷ್ಟಾಚಾರ ಮುಕ್ತಕ್ಕೆ ಪಣ ತೊಡಲಿದೆ ಎಂದರು.
ಎಎಪಿ ಮಾಧ್ಯಮ ಪ್ರತಿನಿಧಿ ಡಾ|| ಕೆ.ಸುಂದರಗೌಡ ಮಾತನಾಡಿ ದೇಶದ ಪ್ರಜೆಗಳು ಸದೃಢ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕುಟುಂಬ ರಾಜಕಾರಣವನ್ನು ಬದಿಗೊತ್ತಬೇಕು. ಆಸೆ, ಆಮಿಷಗಳಿಗೆ ಒಳಗಾಗದೇ ಸಮಾಜವನ್ನು ಪರಿವರ್ತಿಸುವಲ್ಲಿ ಪ್ರಾಮಾಣ ಕರಾಗಿ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿಗೆ ಅಧಿಕಾರ ಸಿಗುವಂತೆ ಮಾಡಬೇಕು ಎಂದು ಹೇಳಿದರು.

Aam Admi Party ಇದೇ ವೇಳೆ ಗ್ರಾಮಸ್ಥರ ಹಲವಾರು ಸಮಸ್ಯೆಗಳನ್ನು ಮುಖ್ಯಮಂತ್ರಿ ಚಂದ್ರು ಆಲಿಸಿದರು. ಈ ಸಂದರ್ಭದಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಉಮಾಶಂಕರ್, ಜಿಲ್ಲಾಧ್ಯಕ್ಷ ಲಿಂಗಾರಾಧ್ಯ ಮುಖಂಡರುಗಳಾದ ಎಂ.ಪಿ.ಈರೇಗೌಡ, ಬಿ.ಟಿ.ನಾಗಣ್ಣ, ಹೇಮಂತ್‌ಕುಮಾರ್, ಸೈಯದ್ ಜಮೀಲ್ ಅಹ್ಮದ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...

ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ

ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು....