Thursday, December 18, 2025
Thursday, December 18, 2025

Dr. Devendra Kirti Bhattarak Swamiji ಆಧ್ಯಾತ್ಮಿಕ ಸ್ಪರ್ಶದಿಂದ ಶಾರೀರಿಕ- ಮಾನಸಿಕ ಆರೋಗ್ಯ ವರ್ಧನೆ-ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ

Date:

Dr. Devendra Kirti Bhattarak Swamiji ಪ್ರಾಚೀನ ತೀರ್ಥಕ್ಷೇತ್ರಗಳು ಪ್ರಕೃತಿ-ಪರಿಸರ ರಕ್ಷಣೆಯ ಸಂದೇಶ ಸಾರುವ ಐಹಿತ್ಯ ಹೊಂದಿವೆ. ನದಿಗಳ ಮೂಲವಾಗಿರುವ ಕುಮದ್ವತಿ ತೀರ್ಥವು ಪ್ರಕೃತಿಯ ಒಡಲಿನಿಂದ ಜಲಧಾರೆಯನ್ನು ಮಾನವ ಕುಲಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೆ ನೀಡುವ ಅಪೂರ್ವ ತಾಣವಾಗಿದೆ” ಎಂದು ಹೊಂಬುಜ ಶ್ರೀಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಿಳಿಸಿದರು.

ಅವರು ಶ್ರೀಕ್ಷೇತ್ರದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಬಳಿಕ ಭೂಮಿಗೆ ಅಮೂಲ್ಯ ಜಲನಿಧಿಯಾಗಿ ಆರಾಧಿಸಲ್ಪಡುವ ಕುಮುದ್ವತಿ ತೀರ್ಥದಲ್ಲಿ ಕಾರ್ತೀಕ ಲಕ್ಷದೀಪೋತ್ಸವ ನಿಮಿತ್ತ ಸೋಮವಾರದಂದು ನಡೆದ ಧಾರ್ಮಿಕ ಪ್ರವಚನದಲ್ಲಿ “ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ನಿರ್ವಹಣೆ ಸುಲಲಿತ. ಆದರೆ ನಮ್ಮ ಪೂರ್ವಜರು ಆರಾಧಿಸುವ ಪುಣ್ಯಪವಿತ್ರ ಸಾನಿಧ್ಯದ ಇತಿಹಾಸ ಅರಿತು, ಪರಂಪರೆ ಉಳಿಸುವ ಮೂಲಕ ಆಧ್ಯಾತ್ಮಿಕ ಸ್ಪರ್ಶದಿಂದ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುತ್ತದೆ.

ಧಾರ್ಮಿಕ ಪ್ರಜ್ಞೆ ಬೆಳೆದು ಪ್ರೀತಿ ವಾತ್ಸಲ್ಯದ ಅನ್ಯೋನ್ಯ ಸಂಬಂಧಗಳು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡುತ್ತದೆ ಎಂದರು.

ಕಾರ್ತೀಕ ಮಾಸದಲ್ಲಿ ದೀಪಾರಾಧನೆಯ ಸಂಸ್ಕೃತಿಯು ಸ್ಥಾನಿಕ ಅಭಿವೃದ್ಧಿ, ರಕ್ಷಣೆಗಾಗಿ ಸಂದೇಶ ನೀಡುತ್ತಿದ್ದು, ಪ್ರತಿಯೋರ್ವರ ಸದ್ಭಾವನೆಯ ಜೀವನ ಯಶಸ್ವಿಯಾಗಲಿ” ಎಂದು ಆಶೀರ್ವಚನ ನೀಡಿದರು.

Dr. Devendra Kirti Bhattarak Swamiji ಊರ ಸಮಸ್ತರು, ಪರವೂರ ಭಕ್ತರು ವೈಶಿಷ್ಟಪೂರ್ಣ ದೀಪಾರಾಧನೆಯ ವರ್ಣರಂಜಿತ ದೃಶ್ಯಗಳಿಂದ ಮಂತ್ರಮುಗ್ಧರಾದರು. ಶ್ರೀಮಠದ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹುಂಚ-ಬಿಲ್ಲೇಶ್ವರ ಗ್ರಾಮದ ನಾಗರೀಕರು ಲಕ್ಷದೀಪೋತ್ಸವದ ದೃಶ್ಯಾವಳಿಯಿಂದ ಪುನೀತರಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...