Aam Admi Party ಪೋಲೀಸರು ಹಾಗೂ ವಕೀಲರ ನಡುವೆ ಏರ್ಪಟ್ಟಿರುವ ಸಂಘರ್ಷ ವನ್ನು ಬಗೆಹರಿಸಲು ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ಸಂದಾನಗೊಳಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿ ಸಬೇಕು ಎಂದು ಎಎಪಿ ಮಾಧ್ಯಮ ಪ್ರತಿನಿಧಿ ಡಾ|| ಕೆ.ಸುಂದರಗೌಡ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳಾ ದ ವಕೀಲರು ಹಾಗೂ ಪೊಲೀಸರು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಬದಲು ಸಂಘರ್ಷಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ ಎಂದು ತಿಳಿಸಿದ್ದಾರೆ.
ಎರಡು ವೃತ್ತಿಯಲ್ಲಿರುವವರು ಸಮಸ್ಯೆ ಉಲ್ಬಣಗೊಳ್ಳದಂತೆ ಸಭೆ ನಡೆಸಿ ಸೌಹಾರ್ದಯುತವಾಗಿ ಪರಿಹರಿಸಿ ದರೆ ಮಾತ್ರ ನಾಗರೀಕ ಸಮಾಜವು ತಲೆಎತ್ತಿ ಬದುಕಲು ಸಾಧ್ಯ. ಹಾಗಾಗಿ ಶಾಂತಿಯಿಂದ ಸಮಸ್ಯೆಗಳನ್ನು ಬಗೆಹರಿ ಸಬೇಕೇ ಹೊರತು ಬೀದಿಗಿಳಿದು ಹೋರಾಟ ನಡೆಸಿದರೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ವಕೀಲರು ಮತ್ತು ಪೊಲೀಸರ ಪ್ರಕರಣವು ಉಗುರಿನಿಂದ ಹೋಗುವ ಬದಲು ಕೊಡಲಿಯನ್ನು ತೆಗೆ ದುಕೊಂಡಾಗಿದೆ. ಪೊಲೀಸರು ಸಹ ಆಸ್ಮಾ ಕಾಯ್ದೆ ಧಿಕ್ಕರಿಸಿ ಸಮವಸ್ತçದಲ್ಲೇ ತಡರಾತ್ರಿವರೆಗೂ ರಸ್ತೆ ತಡೆ ನಡೆಸಿ ರುವುದು ಪ್ರಜಾಪ್ರಭುತ್ವದ ಘನತೆ, ಗೌರವಕ್ಕೆ ಧಕ್ಕೆ ತರುವಂತೆ ಮಾಡಿರುವುದು ಶೋಚನೀಯ ಎಂದಿದ್ದಾರೆ.
Aam Admi Party ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಮಂತ್ರಿಗಳು ಯಾವುದೇ ಚಕಾರತೆತ್ತದೇ ಮೌನ ವಹಿಸಿರುವುದು ಇನ್ನಷ್ಟು ಬೆಂಕಿಹಚ್ಚುವಂತಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ, ಸಚಿವರು ಹಾಗೂ ಜಿಲ್ಲಾಡಳಿತ ಒಗ್ಗಟ್ಟಾಗಿ ಜಿಲ್ಲಾ ನ್ಯಾಯಾಧೀಶರು, ಪೊಲೀಸ್ ವರಿಷ್ಟಾಧಿಕಾರಿಗಳೊಂದಿಗೆ ಮಾನವೀತೆಯ ನೆಲೆಯಡಿಯಲ್ಲಿ ನ್ಯಾಯಯುತ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.