Friday, June 13, 2025
Friday, June 13, 2025

B.R.Ambedkar ಪ್ರತಿಯೊಬ್ಬ ಹಿಂದುಳಿದವನ ಸಾಧನೆಗೆ ಅಂಬೇಡ್ಕರ್ ಕೊಡುಗೆ ಅಪಾರ- ಬಿ.ಆರ್.ರುದ್ರಯ್ಯ

Date:

B.R.Ambedkar ಅಂಬೇಡ್ಕರ್ ಹೋರಾಟದ ಫಲದಿಂದ ನಾವು ಉತ್ತಮ ಜೀವನ ಸಾಗಿಸುತ್ತಿ ದ್ದೇವೆ. ಅವರ ಚೈತನ್ಯದ ಶಕ್ತಿಯನ್ನು ಇಂದಿನ ಯುವಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಸಂವಿಧಾನ ಹಿತರಕ್ಷಣಾ ವೇದಿಕೆ ಮುಖಂಡ ಬಿ.ಆರ್.ರುದ್ರಯ್ಯ ಹೇಳಿದರು.

ಚಿಕ್ಕಮಗಳೂರು ಪಟ್ಟಣದ ಗೊಣ ಬೀಡು ಸಮೀಪದ ಜನ್ನಾಪುರ ವೃತ್ತದಲ್ಲಿ ಸಮಾನತೆ ಶಕ್ತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಡಾ|| ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಸಮಾನವಾಗಿ ಬದುಕಿ, ನ್ಯಾಯದಾನ, ಅಧಿಕಾರ ಪಡೆಯಲು ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ಇಡೀ ಜೀವನವನ್ನೇ ಅಂಬೇಡ್ಕರ್ ತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬ ಹಿಂದುಳಿದವನ ಸಾಧನೆಗೆ ಅಂಬೇಡ್ಕರ್ ಅವರ ಕೊಡುಗೆಯೇ ಅಪಾರವೆಂದರು.
ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಭವ್ಯ ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಿ, ಸಂವಿಧಾನವನ್ನು ರಚಿಸಿದವರು ಹಾಗೂ ತಾರತಮ್ಯದ ಕತ್ತಲಿನ ಸಮಾಜಕ್ಕೆ ಸಂವಿಧಾನದ ದೀವಿಗೆ ಹಿಡಿದ ಮಹಾ ನ್ ಚೇತನ ಡಾ|| ಬಿ.ಆರ್.ಅಂಬೇಡ್ಕರ್ ಎಂದು ಹೇಳಿದರು.

ಬಾಬಾ ಸಾಹೇಬರ ಚಿಂತನೆಗಳು ದಲಿತರ ಜೀವನಾಡಿ. ಅವರ ಅನುಸರಿಸಿದ ಸರಳ-ತರ್ಕಬದ್ಧವಾದ ಜೀವನ ಭಾರತೀಯರೆಲ್ಲರಿಗೂ ದಾರಿದೀಪ. ಅಂಬೇಡ್ಕರ್ ಎಂದರೆ ಬೆಳಕು. ಆ ಬೆಳಕಿನಲ್ಲಿ ನಾವೆಲ್ಲರೂ ಸಾಮಾಜಿಕ ಹೋರಾಟದ ಬೆಳಕನ್ನು ಮನೆ ಮನೆಗೆ ಹಚ್ಚಬೇಕಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಹೆಚ್.ಕೆ.ಸುಂದ್ರೇಶ್ ಮಾತನಾಡಿ ಅಂಬೇಡ್ಕರ್ ದೇಶದ ಬಡವರ, ಶೋಷಿತರ ಪಾಲಿನ ಆಶಾಕಿರಣ. ಜನರು ನೆಮ್ಮದಿಯಿಂದ ಬದುಕಲು ಸಂವಿಧಾನವೇ ಶಕ್ತಿಕೊಡುತ್ತದೆ. ಇಂತಹ ಸಂವಿಧಾನ ವನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಪಣತೊಟ್ಟು ಮಾಡಬೇಕು ಎಂದರು.

ಸಮಾಜದ ಕಟ್ಟಕಡೆಯ ಸಮುದಾಯವಾಗಿ ಜೀವನ ನಡೆಸುತ್ತಿದ್ದ ದಲಿತರಿಗೂ ಸಹ ಪರಿಪೂರ್ಣವಾದಂ ತಹ ಜೀವನ ಅವಕಾಶವನ್ನು ಒದಗಿಸಿಕೊಡಲು ಹಗಲು-ರಾತ್ರಿ ಕಷ್ಟಪಟ್ಟು ಭಾರತಕ್ಕೆ ವಿಶಾಲವಾದಂತಹ ಸಂವಿಧಾ ನವನ್ನು ರಚಿಸಿಕೊಟ್ಟವರು ಎಂದು ಬಣ್ಣಿಸಿದರು.

B.R.Ambedkar ಕಾರ್ಯಕ್ರಮಕ್ಕೂ ಮುನ್ನ ಚಿನ್ನಿಗ ಗ್ರಾಮದಿಂದ ನೀಲಿಧ್ವಜಸ್ಥಂಭದವರೆಗೂ ಅಂಬೇಡ್ಕರ್ ಭಾವಚಿತ್ರವನ್ನು ನೂರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಹಾಗೂ ಮಕ್ಕಳು ಮೆರವಣ ಗೆ ಮೂಲಕ ಸಾಗಿದರು.
ಈ ಸಂದರ್ಭದಲ್ಲಿ ಸಮಾನತೆ ಶಕ್ತಿ ವೇದಿಕೆ ಮುಖಂಡರುಗಳಾದ ನವಿನ್, ಚಂದನ್, ಇಂದ್ರೇಶ್, ಮಹೇಂದ್ರ ಲೋಹಿತ್, ಕುಮಾರ್, ಮಹೇಶ್, ಪೂರ್ಣೇಶ್ ಹಾಗೂ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗ ವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...