World Day of Person with Disabilities ಇಂದು ವಿಶ್ವ ವಿಕಲಚೇತನರ ದಿನ. ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕುರಿತು ಜಾಗೃತಿ, ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ಸಂಸ್ಥೆಯು 1992 ರಲ್ಲಿ ಅಂಗವಿಕಲ ವ್ಯಕ್ತಿಗಳ ಅಂತರಾಷ್ಟ್ರೀಯ ದಿನದ ವಾರ್ಷಿಕ ಆಚರಣೆಯನ್ನು ಘೋಷಿಸಲಾಯಿತು.
ದಿನದ ಆಚರಣೆಯು ಅಂಗವೈಕಲ್ಯ ಸಮಸ್ಯೆಗಳ ತಿಳುವಳಿಕೆಯನ್ನು ಉತ್ತೇಜಿಸಲು, ಹಾಗೂ ವಿಕಲಾಂಗ ವ್ಯಕ್ತಿಗಳ ಘನತೆ, ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಬೆಂಬಲವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.
ರಾಜಕೀಯ , ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಅಂಶಗಳಲ್ಲಿ ವಿಕಲಾಂಗ ವ್ಯಕ್ತಿಗಳ ಏಕೀಕರಣದಿಂದ ಪಡೆಯಬಹುದಾದ ಲಾಭಗಳ ಅರಿವನ್ನು ಹೆಚ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ವಿಕಲ ಚೇತನರು ಎಲ್ಲಾ ಕ್ಷೇತ್ರ ದಲ್ಲೂ ಸಾಧನೆ ಮಾಡುತ್ತಿದ್ದಾರೆ.
World Day of Person with Disabilities ಅಂಗವಿಕಲರು ಈ ದೇಶದ ಪ್ರಜೆಗಳು ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕು ಮತ್ತು ಖಾತ್ರಿಪಡಿಸಬೇಕು ಎಂಬುದನ್ನು ಸಮಾಜವೂ ತಿಳಿದುಕೊಳ್ಳಬೇಕು. ಸ್ವಯಂ ಸೇವಕರ ಪ್ರಚಾರವು ‘ವಿಕಲಚೇತನʼ ರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಸ್ವಯಂಸೇವಕರು ಪ್ರಮುಖ ಪಾತ್ರ ವಹಿಸುತ್ತದೆ. ಅಂಗವಿಕಲರ ವಲಯದಲ್ಲಿ ತರಬೇತಿ ಪಡೆದ ಸ್ವಯಂ ಸೇವಕರ ಸಂಖ್ಯೆಯನ್ನು ಹೆಚ್ಚಿಸುವುದು ಅಂಗವಿಕಲರ ಬಗ್ಗೆ ನಮ್ಮ ಸಮಾಜದ ಮನೋಭಾವವನ್ನು ಬದಲಿಸಲು ಮತ್ತು ಅಂಗವಿಕಲರ ಹಕ್ಕುಗಳ ರಕ್ಷಣೆಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ಕೊಡುಗೆ ನೀಡುತ್ತದೆ.
ಕೆ ಲೈವ್ ಎಲ್ಲಾ ಓದುಗರಿಗೂ ವಿಶ್ವ ಅಂಗವಿಕಲ ದಿನಾಚರಣೆಯ ಶುಭಾಶಯಗಳು..