Silkyara tunnel Incident ಒಟ್ಟು 41 ಕಾರ್ಮಿಕರ ಜೀವ ರಕ್ಷಣೆ ಉದ್ದೇಶದಿಂದ ಸಿಲ್ಕ್ಯಾರ ಸುರಂಗದ ಪರಿಸರದಲ್ಲಿ ಮಣ್ಣಿನ ಕೊರೆತ ಮಾಡಲಾಗಿತ್ತು.. ಆದ್ದರಿಂದ ಹಾಳಾಗಿರುವ ಸುರಂಗದ ಸ್ವರೂಪವನ್ನು ಮತ್ತೆ ಮೊದಲ ರೂಪಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ. ಜೋಜೀರಾ ಟನಲ್ ಸಂಸ್ಥೆಯ ಮುಖ್ಯಸ್ಥ ಹರ್ಪಾಲ್ ಸಿಂಗ್ ಅವರ ಪ್ರಕಾರ ಸುರಂಗ ಕುಸಿತಕ್ಕೆ ನಾನಾ ಕಾರಣಗಳಿವೆ ಎಂದಿದ್ದಾರೆ.
ದೇಶದ ಎಲ್ಲಾ ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗದ ಸುರಂಗಗಳಲ್ಲಿ ತುರ್ತು ಬಿಡುಗಡೆಗೆ ಸಾಧ್ಯವಾಗುವ ಸುರಂಗ ಮಾರ್ಗಗಳನ್ನು ಸಮಾನಾಂತರವಾಗಿ ಯೋಜನೆ ಮಾಡಬೇಕಾಗಿದೆ. ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಿಲ್ಕ್ಯಾರ ಸುರಂಗ ಕುಸಿತದ ಬಗ್ಗೆ ಎದ್ದಿರುವ ಆರೋಪಗಳ ಬಗ್ಗೆ ಅದು ತಪ್ಪು ಮಾಹಿತಿ ಯಿಂದ ಕೂಡಿದ ಎಂದಿದ್ದಾರೆ… ಇಂತಹ ಯೋಜನೆಗಳನ್ನ ಕೈಗೊಳ್ಳುವಾಗ ಸರ್ಕಾರವು ಬಹಳ ಗಂಭೀರವಾಗಿ ಪರಿಸರ ಬಗ್ಗೆ ತೀವ್ರ ಗಮನ ಹರಿಸುತ್ತದೆ ಎಂದೂ ಕೂಡ ತಿಳಿಸಿದ್ದಾರೆ. ಸದ್ಯ ಸುರಂಗದ ಅವಶೇಷಗಳನ್ನು ಖಾಲಿ ಮಾಡುವ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಪೂರೈಸಲು ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು ಎಂದು ಹೇಳಿದ್ದಾರೆ.
Silkyara tunnel Incident 41 ಕಾರ್ಮಿಕರೆಲ್ಲರೂ ಈಗ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. ಎಲ್ಲರ ಆರೋಗ್ಯವು ದೃಢವಾಗಿದೆ ಎಂದು ವರದಿಯಾಗಿದೆ. ಕಾಮಗಾರಿ ಸಂಸ್ಥೆ ನವಯುಗದ ಪ್ರತಿನಿಧಿಗಳು ಎಲ್ಲಾ ಕಾರ್ಮಿಕರನ್ನು ಭೇಟಿ ಮಾಡಿ ಪ್ರತಿಯೊಬ್ಬರಿಗೂ ಎರಡು ಲಕ್ಷ ರೂಪಾಯಿ ಚೆಕ್ ನೀಡಿದೆ. ರಾಜ್ಯ ಸರ್ಕಾರವು ಪ್ರತಿ ಕಾರ್ಮಿಕರಿಗೂ ಒಂದು ಲಕ್ಷ ರೂಪಾಯಿ ನೀಡಿದೆ. ಇತಿಹಾಸದಲ್ಲಿ ಅತ್ಯಂತ ಕಷ್ಟಕರವಾದ ಪಾರುಗಾಣಿಕಾ ಕಾರ್ಯಚರಣೆಗಳಲ್ಲಿ ದೃಢಸಂಕಲ್ಪದಿಂದ ಕಾರ್ಯನಿರ್ವಹಿಸಿದ ತಂಡಗಳು ಹಾಗೂ ತಜ್ಞರಿಗೆ ನಾನು ಅಭಿನಂದಿಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.–