Thursday, June 18, 2026
Thursday, June 18, 2026

Klive Special Article ಯಮ ದ್ವಿತೀಯ

Date:

Klive Special Article ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ

ದೀಪಾವಳಿಯು ಐದು ದಿನಗಳ ಹಬ್ಬವಾಗಿದೆ.
ಆದರೆ, ಈಗಿನ ದಿನಗಳಲ್ಲಿ ಮೂರುದಿನಗಳು ಹಬ್ಬವನ್ನು ಆಚರಿಸುವುದು ರೂಢಿಗೆ ಬಂದಿದೆ.ಐದು ದಿನಗಳ ಹಬ್ಬಎಂದರೆಮೊದಲದಿನನೀರುತುಂಬುವುದು,ಎರಡನೇ ದಿನ ನರಕ ಚತುರ್ದಶಿ,ಮೂರನೇ ದಿನ ದೀಪಾವಳಿ ಅಮಾವಾಸ್ಯೆ,ನಾಲ್ಕನೇದಿನ ಬಲಿಪಾಡ್ಯಮಿ ಮತ್ತು ಐದನೇದಿನ ಯಮ ದ್ವಿತೀಯ ಹಬ್ಬ.

ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಿತೀಯ ದಿನದಂದು
ಸಹೋದರರು ಮದುವೆಯಾದ ಸಹೋದರಿಯರ
ಮನೆಗೆ ಹೋಗಿ ಊಟ ಮಾಡಿಬರುವುದು ಈ ದಿನದ
ವಿಶೇಷ. ಈ ದಿನವನ್ನು ಯಮದ್ವಿತೀಯ ಎಂದು ಕರೆಯುತ್ತಾರೆ. ಯಮಧರ್ಮರಾಯ ತನ್ನ ಸಹೋದರಿ ಯಮುನೆ(ಯಮುನಾನದಿ..ಸೂರ್ಯ-ಸಂಜ್ಞಾ ದೇವಿಯರ ಮಗಳು)ಯ ಮನೆಗೆ ಹೋಗಿ ಅಲ್ಲಿ
ಸಹೋದರಿ ನೀಡಿದ ಆತಿಥ್ಯ ಸ್ವೀಕರಿಸಿ ಯಮಧರ್ಮ
ರಾಜನು ಸಹೋದರಿಗೆ ಅನುಗ್ರಹಿಸುತ್ತಾನೆ.

ಈ ಸಂತೋಷದ ಸಂದರ್ಭದಲ್ಲಿ ಯಮಧರ್ಮನು
ಸಹೋದರಿಗೆ ಒಂದು ವರವನ್ನು ಕೇಳುವಂತೆ ಹೇಳು
ತ್ತಾನೆ.ಅದಕ್ಕೆ ಯಮುನೆಯು ಅಣ್ಣಾ ನನಗೆ ಯಾವುದೇ ವರವೂ ಬೇಡ,ಪ್ರತಿವರ್ಷ ಇದೇ ರೀತಿ
ಪ್ರೀತಿಯಿಂದ ನಮ್ಮ ಮನೆಗೆ ಈ ದ್ವಿತೀಯದಂದು
ಬರಬೇಕೆಂದು ಪ್ರಾರ್ಥಿಸುತ್ತಾಳೆ. ಯಮುನೆಯ
ಕೋರಿಕೆಯನ್ನು ಕೇಳಿ ಅವಳಿಗೆ ಮತ್ತು ಎಲ್ಲಾ ಸಹೋದರರಿಗೂ ಒಳ್ಳೆಯದಾಗುವಂತೆ ಒಂದು ವರವನ್ನು ಕೊಡುತ್ತಾನೆ. “ಯಾರು ಕಾರ್ತಿಕ ಶುದ್ಧ ದ್ವಿತೀಯದಂದು ಸಹೋದರರನ್ನು ಕರೆಸಿ ಸಂತೋಷದಿಂದ ಅವರಿಗೆ ಊಟವನ್ನು ಮಾಡಿಸು
ತ್ತಾರೋ,ಅಂತಹ ಸಹೋದರಿಯ ಮನೆಯಲ್ಲಿ
ಊಟಮಾಡಿದ ಸಹೋದರನಿಗೆ ದೀರ್ಘಾಯುಷ್ಯ
ವಂತನಾಗುವಂತೆ ಅನುಗ್ರಹಿಸುವುದಲ್ಲದೇ,ಆದರಿಸಿದ
ಸಹೋದರಿಗೆ ಸಕಲ ಸನ್ಮಂಗಲ ಸೌಭಾಗ್ಯವು ದೊರೆಯುವುದು ಎಂದುವರವನ್ನುಅನುಗ್ರಹಿಸುತ್ತಾನೆ.

Klive Special Article ಯಮದ್ವಿತೀಯ ಹಬ್ಬ ಎಲ್ಲರಿಗೂ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...