Monday, March 30, 2026
Monday, March 30, 2026

Department of Labor ಖಾಸಗಿ ವಾಣಿಜ್ಯ ಸಾರಿಗೆ ವಾಹನ ಕಾರ್ಮಿಕರೇ ಗಮನಿಸಿ: ಅಪಘಾತ ಪರಿಹಾರ ಯೋಜನೆಯಡಿ ನೊಂದಣಿ ಪ್ರಕ್ರಿಯೆ ಆರಂಭ

Date:

Department of Labor ಕಾರ್ಮಿಕ ಇಲಾಖೆಯು ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೆ ತಂದಿದೆ. ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳು ಕಾರ್ಮಿಕ ಅಧಿಕಾರಿಗಳ ಕಚೇರಿ, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇಲ್ಲಿ ನೋಂದಾಯಿಸಿಕೊಳ್ಳುವAತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿರುತ್ತಾರೆ.

Department of Labor ಈ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತಿದೆ. ವಯೋಮಿತಿ 20 ರಿಂದ 70 ರೊಳಗಿರಬೇಕು. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲು ಸಹ ಅನ್ವಯಿಸುತ್ತದೆ. ಚಾಲಕರು ಕ.ರಾ.ಸಾ.ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಊರ್ಜಿ ಚಾಲನಾ ಪರವಾನಿಗೆಯನ್ನು ಹೊಂದಿರುವುದು ಖಡ್ಡಾಯ. ಚಾಲಕರು ಮಂಡಳಿಯಲ್ಲಿ ಯೋಜನೆಯಡಿ ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ಅವಶ್ಯಕತೆಯಿರುವುದಿಲ್ಲ. ನಿರ್ವಾಹಕರು ಹಾಗೂ ಕ್ಲಿನರ್‌ಗಳು ಮಂಡಳಿಯ ನಿಯಮಾನುಸಾರು ಕಾರ್ಮಿಕ ಇಲಾಖೆಯಲ್ಲಿ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿ ಮಾಡಿಸಿಕೊಳ್ಳುವುದು.
ಅಪಘಾತದಿಂದ ಚಾಲಕರು ನಿರ್ವಾಹಕರು ಮತ್ತು ಕ್ಲೀನರ್‌ಗಳು ಮರಣ ಹೊಂದಿದ್ದಲ್ಲಿ ಅವರ ನಾಮ ನಿರ್ದೇಶಿತರಿಗೆ ರೂ. 5ಲಕ್ಷ ಪರಿಹಾರ, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ. 2 ಲಕ್ಷ ಹಾಗೂ ತಾತ್ಕಾಲಿಕ ದುರ್ಬಲತೆ ಹೊಂದಿದಾಗ ಅಪಘಾತಕ್ಕೋಳಗಾಗಿ ಅಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ಗರಿಷ್ಠ ರೂ. 50 ಸಾವಿರಗಳ ವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು. 15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ ಗರಿಷ್ಠ ರೂ. 1 ಲಕ್ಷದವರೆಗೆ ಅಥವಾ ನಿಖರ ಅಸ್ಪತ್ರೆ ವೆಚ್ಚ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆ ಕಚೇರಿ ದೂ.ಸಂ.:08182-248940 ನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಎಲ್ಲರೂ ಸಹಬಾಳ್ವೆ,ಸಹಕಾರ ಸೇವಾ ಮನೋಭಾವನೆಯಿಂದ ಬಾಳಬೇಕೆಂಬುದೇ ಮಹಾವೀರರ ಸಂದೇಶ- ಕೆ. ರಂಗನಾಥ್

ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು...

Adichunchabagiri Education Trust ದೇಹ ಆರೋಗ್ಯವಾಗಿದ್ದರೆ, ದೇಶವೂ ಆರೋಗ್ಯ- ಶ್ರೀನಾದಮಾಯಾನಂದನಾಥಶ್ರೀ

ದೇಹದ ಆರೋಗ್ಯ ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಶ್ರೀ ಆದಿ...

Klive Special Article ಮರೆಯಲಾಗದ ಮಾನವೀಯ ಸಂದೇಶ ಸಾರಿದ ಶ್ರೀಮಹಾವೀರ. ...

Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು...