Navaratri “ಶ್ವೇತೆ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದದ್ಯಾತ್ ಮಹಾದೇವ
ಪ್ರಮೋದದಾ//
ಇಂದು ನವರಾತ್ರಿಯ ಎಂಟನೆಯ ದಿವಸ.
ಇಂದು ದೇವಿಯ ಎಂಟನೆಯ ರೂಪವಾದ ಮಹಾ
ಗೌರಿಯ ಆರಾಧನೆಯ ದಿನ.
ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ರೂಪ
ಮಹಾಗೌರಿಯ ಅವತಾರ ರೂಪ.ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾ ಪ್ರಭೆಯಿಂದ
ಹೊಳೆಯುವುದು.ನಂದಿವಾಹನರೂಢಳಾದ ದೇವಿಯು ಶಾಂತಿ ಮತ್ತು ಸಂತೋಷದ ಪ್ರತೀಕ.
ನಾಲ್ಕು ಭುಜಗಳನ್ನು ಹೊಂದಿರುವ ಮಾತೆ,ಅಭಯ ಹಸ್ತದಿಂದ ಭಕ್ತರನ್ನು ಹರಸುತ್ತಿದ್ದಾಳೆ.ಒಂದು ಕೈಯಲ್ಲಿ
ದುಷ್ಟಶಕ್ತಿಗಳನ್ನು ನಿಗ್ರಹಿಸಲು ತ್ರಿಶೂಲವನ್ನು ಹಿಡಿದಿರು
ತ್ತಾಳೆ.
ಭಕ್ತರಿಗೆ ಶಾಂತಿ ಮತ್ತು ಸಂತೋಷವನ್ನುಕೊಟ್ಟು
ಅನುಗ್ರಹಿಸುವ ಮಹಾಗೌರಿಮಾತೆಗೆ ಭಕ್ತಿಯ ನಮನಗಳನ್ನು ಅರ್ಪಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗೋಣ.
Navaratri ಲೇ: ಎನ್.ಜಯಭೀಮ ಜೊಯ್ಸ್.
ಶಿವಮೊಗ್ಗ.