Street trading ಚಿಕ್ಕಮಗಳೂರು, ನಗರಸಭಾ ಅಧ್ಯಕ್ಷರು ಪಕ್ಷದ ಒಡಂಬಡಿಕೆ ನಿಯಮದಂತೆ ರಾಜೀ ನಾಮೆ ಸಲ್ಲಿಸುವ ಬದಲಾಗಿ ಕೊಟ್ಟು ವಾಪಸ್ ತೆಗೆದುಕೊಳ್ಳುವ ಮೂಲಕ ಹಾವಾಡಿಗರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಹಬುದ್ಧೀನ್ ಆರೋಪಿಸಿದ್ದಾರೆ
ಈ ಸಂಬoಧ ಹೇಳಿಕೆಯಲ್ಲಿ ತಿಳಿಸಿರುವ ಅವರು ನಗರದ ಬಹುತೇಕ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆ ನೀಡಿ ದೌರ್ಜನ್ಯವೆಸಗಿರುವ ನೀವು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆಯಾಗಲು ಎಂದಿಗೂ ಸಾಧ್ಯವಿಲ್ಲ. ಆ ಸ್ಥಾನವನ್ನು ಅಲಂ ಕರಿಸಲು ಯೋಗ್ಯತೆಯಿಲ್ಲದ ನಿಮಗೆ ಕೂಡಲೇ ನಿರ್ಗಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದ ಆಸೆ ಹಾಗೂ ನಗರಸಭಾ ಪ್ರತಿಯೊಂದು ಕೆಲಸದಲ್ಲೂ ಶೇ.20 ಕಮೀಷನ್ ಗಾಗಿ ಇನ್ನೂ ಸ್ಥಾನವನ್ನು ಬಿಡದೇ ಅಂಟಿಕೊ0ಡಿರುವುದು ಗಮನಿಸಿದರೆ ಹಣದ ದಾಹ ಹೆಚ್ಚಾದಂತೆ ಇದೆ. ಕೂಡಲೇ ಇಂತಹ ಜನವಿರೋಧಿ ನಗರಸಭೆ ಅಧ್ಯಕ್ಷರನ್ನು ಕೆಳಗಿಳಿಸಲು ಸಾರ್ವಜನಿಕರಿಂದ ಕೂಗು ಕೇಳಲಾ ರಂಬಿಸಿದ್ದರೂ ಇದನ್ನು ದಿಕ್ಕರಿಸಿ ಎಲ್ಲೋ ಅವಿತುಕೊಂಡಿದ್ದಾರೆ ಎಂದು ದೂರಿದ್ದಾರೆ.
ಪಕ್ಷದ ಆಂತರಿಕ ಒಪ್ಪಂಪದ ಪ್ರಕಾರ ರಾಜೀನಾಮೆ ಸಲ್ಲಿಸುವ ಮೂಲಕ ಮುಂದಿನ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಇದೇ ರೀತಿ ಮುಂದುವರೆದರೆ ನಾಲಾಯಕ್ ಅಧ್ಯಕ್ಷನಾಗಿ ಎಲ್ಲರ ವಿರೋಧದ ನಡುವೆ ಅಧಿಕಾರದಿಂದ ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Street trading ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರಾದ ಇರ್ಫಾನ್, ಸಮೀರ್, ಸಾದಿಕ್, ರಫೀಕ್, ಪರ್ವೀಜ್, ಜಾವಿದ್ ಮತ್ತಿತರರು ಹಾಜರಿದ್ದರು.