ಶರನ್ನವರಾತ್ರಿ(ಎರಡನೆಯದಿನ)
“ದಧಾನಾಂ ಕರಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲೂ/
ದೇವಿ ಪ್ರಸೀದತು ಮಯಿ
ಬ್ರಹ್ಮಚಾರಿಣ್ಯನುತ್ತಮಾ//
*
ಇಂದು ಶರನ್ನವರಾತ್ರಿಯ ಎರಡನೆಯದಿವಸ.
ಮೊದಲನೆಯ ದಿನ ದೇವಿಯ ಶೈಲಪುತ್ರಿರೂಪದಿಂದ ಪೂಜಿಸಲ್ಪಡುತ್ತಾಳೆ.
ಎರಡನೆಯ ದಿನ ದೇವಿಯನ್ನು ಬ್ರಹ್ಮಚಾರಿಣಿ
ರೂಪದಲ್ಲಿ ಪೂಜಿಸಲಾಗುತ್ತದೆ.
ಜಗನ್ಮಾತೆಯನ್ನು ಬ್ರಾಹ್ಮೀ ಸ್ವರೂಪದಲ್ಲಿ
ನೋಡುವ ಬಗೆ.ಹಂಸವಾಹಿನಿ ಕಮಂಡಲು ಧಾರಿಣಿ,ಅಕ್ಷಮಾಲೆ,ಪುಸ್ತಕ,ಪಾಶ ಮತ್ತು ಚಿನ್ಮುದ್ರೆ.
ಯೋಗ ಶಾಸ್ತ್ರದ ಪ್ರಕಾರ ಇವೆಲ್ಲವೂ ಜ್ಞಾನದ
ಸಂಕೇತವೇ.ರಜೋಗುಣದ ಸ್ವಭಾವವನ್ನು
ಹೊಂದಿದ್ದಾಳೆ.ಸಪ್ತಮಾತೃಕೆಯರಲ್ಲಿ ಬ್ರಾಹ್ಮಿಯೂ ಒಬ್ಬಳೆಂದು ಗುರುತಿಸಲ್ಪಟ್ಟಿದ್ದಾಳೆ.
ಬ್ರಹ್ಮಚಾರಿಣಿ ಎಂದರೆ ಸಂತೋಷ ಮತ್ತು
ಶಾಂತ ಶಕ್ತಿಯನ್ನು ಹೊಂದಿರುವ ರೂಪ.
ಮೋಕ್ಷವನ್ನು ಬಯಸಿಅಥವಾ ಕಾರ್ಯಗಳ
ವಿಮೋಚನೆಗೆ ಬಯಸಿ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿ ಆರಾಧಿಸಿದರೆದೇವಿ ಅನುಗ್ರಹ ಮಾಡುವಳು.
ದೇವಿಯ ಎರಡನೆಯ ಅವತಾರವಾದ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಿ,ಪೂಜಿಸಿದೇವಿಯಅನುಗ್ರಹಕ್ಕೆ ಪ್ರಾರ್ಥಿಸೋಣ.
ಲೇಖಕ: ಎನ್.ಜಯಭೀಮ ಜೊಯಿಸ್,
ಶಿವಮೊಗ್ಗ.