Thursday, July 9, 2026
Thursday, July 9, 2026

Dharmasthala Rural Development Scheme ಭಾರತದಲ್ಲಾಗುವ ರಸ್ತೆ ಅಪಘಾತಗಳಲ್ಲಿ ಸರಾಸರಿ 15000 ಪ್ರಕರಣಗಳು ಕುಡಿತದ ಕಾರಣದಿಂದ ಘಟಿಸುತ್ತಿವೆ- ಎಚ್.ಬಿ.ಮಂಜುನಾಥ್

Date:

Dharmasthala Rural Development Scheme ಭಾರತದಲ್ಲಿ ವಾರ್ಷಿಕ ಸರಾಸರಿ ಸುಮಾರು ಒಂದೂವರೆ ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದು ಸುಮಾರು 15 ಸಾವಿರದಷ್ಟು ರಸ್ತೆ ಅಪಘಾತಗಳು ಕುಡಿತದಿಂದಾಗಿಯೇ ಆಗುತ್ತಿವೆ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭರಮಸಾಗರದಲ್ಲಿ ಏರ್ಪಾಡಾಗಿರುವ 1738ನೇ ಮದ್ಯವರ್ಜನ ಶಿಬಿರದ ಉಪನ್ಯಾಸಕರಾಗಿ ಮಾತನಾಡುತ್ತಾ ದೇಶದಲ್ಲಿ ವಾರ್ಷಿಕ ಸುಮಾರು ಒಂದೂವರೆ ಲಕ್ಷ ಮಂದಿ ಕುಡಿತದಿಂದಾಗಿಯೇ ಸಾಯುತ್ತಿದ್ದು ಇದರಲ್ಲಿ ಶೇಕಡಾ 70ಕ್ಕೂ ಹೆಚ್ಚು ಪುರುಷರೇ ಆಗಿದ್ದು ಇವರಲ್ಲಿ 30 ರಿಂದ 40 ವರ್ಷದ ಪ್ರಾಯದವರೇ ಹೆಚ್ಚಾಗಿರುತ್ತಾರೆ. ಪೊಲೀಸರ ಬಳಿ ಬರುವ ಪ್ರಕರಣಗಳಲ್ಲಿ 70ಕ್ಕೂ ಹೆಚ್ಚು ಮದ್ಯಪಾನ ಸಂಬಂಧಿಯೇ ಆಗಿರುತ್ತದೆ ಎಂಬುದು ಸಹಾ ಆತಂಕಕಾರಿ ಅಂಶವಾಗಿದ್ದು ಸರ್ಕಾರಗಳು ಮದ್ಯ ಮಾರಾಟದಿಂದ ಬರುವ ಆದಾಯವನ್ನು ಗಮನಿಸುತ್ತವೆಯೇ ವಿನಃ ಮದ್ಯಪಾನದಿಂದ ಆಗುವ ಸಾಮಾಜಿಕ ದುಷ್ಪರಿಣಾಮ ಹಾಗೂ ಪರೋಕ್ಷ ನಷ್ಟವನ್ನು ಗಮನಿಸುವುದಿಲ್ಲ, ದೃಢ ಮನಸ್ಸು ಮಾಡಿದರೆ ಕುಡಿತದ ಚಟದಿಂದ ಹೊರಬರುವುದು ಕಷ್ಟವೇನೂ ಅಲ್ಲ, ಮಧ್ಯ ವ್ಯಸನವು ಪ್ರಕೃತಿದತ್ತವಾಗಿ ಹುಟ್ಟಿನಿಂದ ಬರುವಂತದ್ದಲ್ಲ, ಮಧ್ಯದಲ್ಲಿ ನಾವಾಗಿಯೇ ಅಂಟಿಸಿಕೊಂಡದ್ದು, ಹಾಗಾಗಿ ನಾವೇ ಅದನ್ನು ಬಿಡಬೇಕಾಗಿದೆ ಎಂಬುದನ್ನು ಸ್ವಾರಸ್ಯಕರ ಕಥೆ ಹಾಗೂ ಉದಾಹರಣೆಗಳ ಮುಖಾಂತರ ವಿವರಿಸಿದರು.

Dharmasthala Rural Development Scheme ಭರಮಸಾಗರದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಈ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ ಸುಮಾರು 75 ಮಂದಿ ಎಚ್.ಬಿ. ಮಂಜುನಾಥರ ಉಪನ್ಯಾಸದಿಂದ ಪ್ರಭಾವಿತರಾಗಿ ಮದ್ಯವ್ಯಸನ ಕೈಬಿಡುವುದಾಗಿ ಸ್ಥಳದಲ್ಲೇ ಸಂಕಲ್ಪ ಸಹಾ ಮಾಡಿದರು.

ಶಿಬಿರಾಧಿಕಾರಿ ಕುಮಾರ್, ಮೇಲ್ವಿಚಾರಕ ಮುಖೇಶ್, ಆರೋಗ್ಯ ವಿಷಯ ಸಂಪನ್ಮೂಲ ವ್ಯಕ್ತಿ ಆಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...