ದೇಶದಾದ್ಯಂತ ಕೋವಿಡ್ ನ ಆತಂಕದ ಹಿನ್ನಲೆಯಲ್ಲಿ ಈ ಬಾರಿ ಕಾಣಿಸಿಕೊಂಡ ರೂಪಾಂತರ ತಳಿ ಓಮಿಕ್ರಾನ್ ಎಲ್ಲೆಡೆ ಭೀತಿಯನ್ನು ಸೃಷ್ಟಿಸಿದೆ.
ಬೇರೆಡೆಯಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದ ವಿಮಾನನಿಲ್ದಾಣಗಳಲ್ಲಿ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪ್ರಯಾಣಿಕರ ಪರೀಕ್ಷೆಗೆ ದರ ನಿಗದಿಪಡಿಸಲಾಗಿದೆ. ಈ ವಿಷಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಓಮಿಕ್ರಾನ್ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ತಪಾಸಣೆ ಕಡ್ಡಾಯ ಗೊಳಿಸಲಾಗಿದೆ. ಆದ್ದರಿಂದ ಪ್ರಯಾಣಿಕರನ್ನು ಶೀಘ್ರದಲ್ಲೇ ಪರೀಕ್ಷೆಗೆ ಒಳಪಡಿಸಬೇಕು. ಹಾಗೂ ಪ್ರಯಾಣಿಕರು ವಿಮಾನ ನಿಲ್ದಾಣಗಳ ಆವರಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳ ಬೇಕಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಲ್ಲಿನ ಕೊರೋನಾ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಐಸಿಎಂಆರ್ ಪ್ರಮಾಣಿತ ಪರೀಕ್ಷೆಗಳಿಗೆ ದರ ನಿಗದಿ ಪಡಿಸಲಾಗಿದೆ. ಈ ವಿಷಯವನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ಕೆ. ಅನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಆರ್ ಟಿಪಿಸಿಆರ್ ಪರೀಕ್ಷೆಗೆ 500ರೂ, ಅಬ್ಬಾಟ್ ಐಡಿ 3000ರೂ, ಥರ್ಮೋ-ಫಿಷರ್ ಅಕ್ಯುಲಾ 1500ರೂ, ಟಾಟಾ ಎಂಡಿ 3 ಜೀನ್ ಫಾಸ್ಟ್ ಅಥವಾ ಟಾಟಾ ಎಂಡಿಎಕ್ಸ್ಎಫ್ 1200 ರೂ, ಹಾಗೂ ಸಿಫೈಡ್ ಜೀನ್ ಎಕ್ಸ್ ಪರ್ಟ್ 2,750 ರೂ. ಇದು ವಿಮಾನ ನಿಲ್ದಾಣಗಳಲ್ಲಿ ದರ ಪಟ್ಟಿ ಪ್ರದರ್ಶಿಸಲಾಗಿದೆ.