Research Methodology, Research Publication ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ‘ರೀಸರ್ಚ್ ಮೆಥಡಾಲಜಿ, ರೀಸರ್ಚ್ ಪಬ್ಲಿಕೇಷನ್’ ಎಂಬ ವಿಷಯ ಕುರಿತು ಅ.3 ರಿಂದ 7 ರವರೆಗೆ ಐದು ದಿನಗಳ ಕಾಲ ಕಾರ್ಯಾಗಾರವನ್ನು ಪ್ರೊ.ಯು.ಆರ್.ರಾವ್ ವಿಜ್ಞಾನ ಭವನ, ಮೇ.ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕಾ ವಿಜ್ಞಾನಗಳ ಕಾಲೇಜು, ಆವರಣ, ಜಿಕೆವಿಕೆ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು ಇಲ್ಲಿ ಆಯೋಜಿಸಿದೆ.
ಕಾರ್ಯಾಗಾರದಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಉಪನ್ಯಾಸಗಳನ್ನು ನೀಡಲಿದ್ದು, ಸ್ನಾತಕೋತ್ತರ ವಿದ್ಯಾರ್ಥಿಗಳು/ಅಧ್ಯಾಪಕರು ಹಾಗೂ ಯುವ ಸಂಶೋಧಕರಿಗೆ ಉಪಯುಕ್ತವಾಗಲಿದೆ. ಈ ಕಾರ್ಯಾಗಾರದಲ್ಲಿ ಪ್ರತಿನಿಧಿಗಳಾಗಿ ರಾಜ್ಯಾದ್ಯಂತ ಸ್ನಾತಕೋತ್ತರ ವಿಜ್ಞಾನ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ಅಧ್ಯಾಪಕರು ಹಾಗೂ ಯುವ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
Research Methodology, Research Publication ಕಾರ್ಯಾಗಾರದಲ್ಲಿ ಭಾವಹಿಸಲು ಇಚ್ಚಿಸುವವರು ಸೆ.30 ರೊಳಗೆ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ವೆಬ್‍ಸೈಟ್ http;//www.kstacademy.in ಅಥವಾ ವೈಜ್ಞಾನಾಧಿಕಾರಿ ವಿ.ಕೆ.ಶ್ರೀನಿವಾಸು ಮೊ.ಸಂ: 9620767819 ರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ರಮೇಶ್ ತಿಳಿಸಿದ್ದಾರೆ.