ಕೊರೋನಾ ವೈರಸ್ ರೂಪಾಂತರ ತಳಿ ಓಮಿಕ್ರಾನ್ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ದೇಶದಲ್ಲಿ ಫೆಬ್ರವರಿ ತಿಂಗಳ ಹೊತ್ತಿಗೆ ಮೂರನೇ ಅಲೆ ಹೇಳುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿ ಮಣೀಂದ್ರ ಅಗರ್ ವಾಲ್ ತಿಳಿಸಿದ್ದಾರೆ.
ಗಣಿತಶಾಸ್ತ್ರೀಯ ಮಾದರಿಯ ಆಧಾರದ ಮೇಲೆ ಅವರು ತಿಳಿಸಿದ್ದಾರೆ.
ಡೆಲ್ಟಾ ತಳಿಯಂತೆ ಪ್ರಸರಣ ಕಂಡುಬಂದಲ್ಲಿ ರಾತ್ರಿ ಕರ್ಫ್ಯೂ, ಜನಸಂದಣಿ ನಿರ್ಬಂಧ ದಂತಹ ಸೌಮ್ಯ ರೀತಿಯ ಲಾಕ್ ಡೌನ್ ನಿಂದ ಅದನ್ನು ನಿಯಂತ್ರಿಸಬಹುದು ಎಂದು ಕೂಡ ತಿಳಿಸಿದ್ದಾರೆ.
ಮೂರನೇ ಅಲೆಗೆ ಓಮಿಕ್ರಾನ್ ಕಾರಣವಾಗಲಿದೆ. ಆದರೆ ಎರಡನೆಯ ತಳಿಯ ತೀವ್ರತೆಗೆ ಹೋಲಿಸಿದರೆ ಮೂರನೆಯ ಅಲೆ ಸೌಮ್ಯ ಸ್ವರೂಪದಲ್ಲಿದೆ. ಈ ಹಿಂದಿನ ಡೆಲ್ಟಾ ತಳಿಗೆ ಹೋಲಿಸಿದರೆ, ಓಮಿಕ್ರಾನ್ ಸೋಂಕಿತರಲ್ಲಿ ತೀವ್ರತೆ ಅಷ್ಟಾಗಿ ಕಂಡು ಬಂದಿಲ್ಲ ಎಂದು ಮನಿಂದ ಅಗರ್ ವಾಲ್ ತಿಳಿಸಿದ್ದಾರೆ.
ಓಮಿಕ್ರಾನ್ ನ ಅಧಿಕ ಪ್ರಕರಣಗಳು ವರದಿಯಾಗಿರುವ ದಕ್ಷಿಣ ಆಫ್ರಿಕಾದ ಬೆಳವಣಿಗೆಗಳ ಮೇಲೆ ಕಣ್ಣಿಡಬೇಕು. ಈಗ ಅಲ್ಲಿ ಹೆಚ್ಚಾಗಿ ಆಸ್ಪತ್ರೆ ಸೇರುವ ಪ್ರವೃತ್ತಿ ಕಂಡುಬಂದಿಲ್ಲ ಎಂದಿದ್ದಾರೆ.
ಓಮಿಕ್ರಾನ್ ನ ಹೊಸ ದತ್ತಾಂಶಗಳು ಮತ್ತು ಆಸ್ಪತ್ರೆ ಸೇರುವವರ ಸಂಖ್ಯೆ ಯು ವೈರಸ್ ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ವೈರಸ್ ನ ಪ್ರಸರಣ ಅತಿ ಹೆಚ್ಚು ಎಂದು ತೋರಿಸಿದ್ದರೂ, ಅದರ ಪರಿಣಾಮ ಅಷ್ಟಾಗಿಲ್ಲ ಎಂದು ಅವರು ಹೇಳಿದ್ದಾರೆ. ಡೆಲ್ಟಾ ಗಿಂತ ಹೆಚ್ಚು ಪ್ರಸರಣ ಸಾಮರ್ಥ್ಯದ, ತೀವ್ರವಾಗಿರುವ ಕರೋನವೈರಸ್ ನ ಹೊಸ ತಳಿ ಪತ್ತೆಯಾಗಿದೆ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಉಂಟಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ನವೆಂಬರ್ ಕೊನೆಯವರೆಗೆ ಹೊಸ ತಳಿ ಕಾಣಿಸಿರಲಿಲ್ಲ. ಹೊಸ ರೂಪಾಂತರ ತಳಿಯ ತೀವ್ರ ಸ್ವರೂಪದಲ್ಲಿದ್ದು ಅಥವಾ ಮಾನವನ ರೋಗನಿರೋಧಕ ಶಕ್ತಿಯನ್ನು ಭೇದಿಸಲಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ ಎಂದು ಐಐಟಿ ವಿಜ್ಞಾನಿ ಮಣೀಂದ್ರ ಅಗರ್ ವಾಲ್ ತಿಳಿಸಿದ್ದಾರೆ.