Akashvani Bhadravati ಆಕಾಶವಾಣಿ ಭದ್ರಾವತಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅದ್ಯಯನ ಕೇಂದ್ರದ ಸಹಯೋಗದಲ್ಲಿ
ಸೆಪ್ಟೆಂಬರ್ 26,2023 ರಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತ ವಿಶೇಷ 15 ಕಂತುಗಳ ಉಪನ್ಯಾಸ
ಮಾಲಿಕೆ ಪ್ರಸಾರವಾಗಲಿದೆ.
ಪ್ರತೀ ಮಂಗಳವಾರ ಬೆಳಿಗ್ಗೆ 7ಗಂಟೆ 15 ನಿಮಿಷದಿಂದ 7 ಗಂಟೆ 30 ನಿಮಿಷದವರೆಗೆ ಡಾ. ಬಿ.ಆರ್.ಅಂಬೇಡ್ಕರ್
ಅವರ ಜೀವನ ಮತ್ತು ಸಾಧನೆಯನ್ನು ವಿಶ್ವವಿದ್ಯಾಲಯದ ಪ್ರಾದ್ಯಾಪಕರು, ವಿಷಯತಜ್ಞರು, ಉಪನ್ಯಾಸ ಮಾಲಿಕೆಯಲ್ಲಿ ತಿಳಿಸಲಿದ್ದಾರೆ,
ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆಯನ್ನು ಕೇಳಲಾಗುವುದು ಇದಕ್ಕೆ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪುರಸ್ಕರಿಸಲಾಗುವುದು. ಸರಿ
ಉತ್ತರವನ್ನು ಆಕಾಶವಾಣಿ ಭದ್ರಾವತಿ ಕೇಂದ್ರ ಅಥವಾ ನಿಲಯ ವಾಟ್ಸಾಪ್ ಸಂಖ್ಯೆ 9481572600 ಗೆ ಅದೇ ದಿನ ಕಳುಹಿಸಬಹುದು.
ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ FM103.5 ಹಾಗೂ MW675Khz ನಲ್ಲಿ ಹಾಗೂ ವಿಶ್ವದಾದ್ಯಂತ Prasarabharathi newsonair App ನಲ್ಲಿ ಭದ್ರಾವತಿ ಕೇಂದ್ರದ ಮೂಲಕ ಪ್ರಸಾರ ಸಮಯದಲ್ಲಿ ಕೇಳಬಹುದು. ಹಾಗೂ ಪ್ರಸಾರ ನಂತರ Bhadravathi YouTube channel ನಲ್ಲಿ ಕೇಳಬಹುದು.
Akashvani Bhadravati ಕೇಳುಗರು ಈ ಕುರಿತು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವಾಟ್ಸಾಪ್ ಸಂಖ್ಯೆ: 9481572600 ಮುಖಾಂತರ ಹಂಚಿಕೊಳ್ಳಬಹುದು
ಎ0ದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .