Siddaramaiah ಇಂದು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು ಉದ್ಘಾಟಿಸಿದರು.
ಆರೋಗ್ಯ ಸಂಬಂಧಿ ಕಾರ್ಯಕ್ರಮಗಳ ಮಾಹಿತಿ ಹೀಗಿವೆ…
ಆರೋಗ್ಯ ಮಿತ್ರ-
ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಗಳ ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಹಾಗೂ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಿ ವಿಶಿಷ್ಟ ಹೆಲ್ತ್ ಎಟಿಎಂ ಜಾರಿ ಮಾಡಲಾಗಿದೆ.
ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ವತಿಯಿಂದ ಜಿಲ್ಲೆಯಲ್ಲಿ ‘ಆರೋಗ್ಯ ಮಿತ್ರ’ ಯೋಜನೆಯನ್ನು ಜಾರಿ ಮಾಡುತ್ತಿದ್ದು, ಕಲಬುರಗಿ ಜಿಲ್ಲೆಗೆ ಹೆಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು CSR ಅನುದಾನದ ಅಡಿಯಲ್ಲಿ ಪಡೆದು ಲೋಕಾರ್ಪಣೆಗೊಳಿಸಲಾಗಿದೆ.
ಜನಸ್ನೇಹಿ ಹೆಲ್ತ್ ಎಟಿಎಂ
- ಆರೋಗ್ಯ ಎಟಿಎಂ: ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನವಾಗಿದ್ದು ಪ್ರಾಥಮಿಕ ಮತ್ತು ತಡೆಗಟ್ಟಬಹುದಾದ ಆರೋಗ್ಯ ಸೇವೆಗಳನ್ನು ಸುಲಭವಾಗಿ ಹಾಗೂ ಕೈಗಟುಕುವ ದರದಲ್ಲಿ ಒದಗಿಸುತ್ತದೆ.
- ನಗರ ಪ್ರದೇಶಗಳಲ್ಲಿ ಜನರ ಜೀವನ ಶೈಲಿಗೆ ಅನುಗುಣವಾಗಿ, ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಮಾಡುವ ಮೂಲಕ ಸಮಯ ಮತ್ತು ಹಣವನ್ನು ಉಳಿಸಬಹುದು.
- ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಅಂತರವನ್ನು ಕಡಿಮೆ ಮಾಡಿ ದುರ್ಗಮ ಪ್ರದೇಶಗಳಿಗೂ ಕೂಡ ಆರೋಗ್ಯ ಸೇವೆಗಳನ್ನು ತಲುಪಿಸಬಹುದು.
- ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಹಿಂದುಳಿದ ವರ್ಗವನ್ನು ಸಬಲೀಕರಣಗೊಳಿಸುವುದು ಹೆಲ್ತ್ ಎಟಿಎಂ ಗುರಿಯಾಗಿದೆ.
ಹೆಲ್ತ್ ಎಟಿಎಂನ ಪ್ರಯೋಜನೆಗಳು:
- ಜನಸಂದಣಿ ಪ್ರದೇಶಗಳಲ್ಲಿ ಲಭ್ಯತೆ ಇರುವ ಆರೋಗ್ಯ ಎಟಿಎಂಗಳ ಮೂಲಕ ಸರಳವಾದ ಆರೋಗ್ಯ ಸೇವೆಗಳ ಲಭ್ಯತೆ
- ನಿಖರವಾದ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಅರೋಗ್ಯ ಎಟಿಎಂಗಳನ್ನೂ ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯ
- ಸಮಗ್ರ ಆರೋಗ್ಯ ಸೇವೆಗಳಿಂದ ತುರ್ತು ಸ್ಪಂದನೆ ರೋಗಿಗಳಿಗೆ ಆತ್ಮಸ್ಟೈರ್ಯ ತುಂಬುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮ ಲಭ್ಯತೆ.
- ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿ.
- ರೋಗಿಯ ದಾಖಲೆಗಳನ್ನು ಸುರಕ್ಷಿತಾಗಿ ಮತ್ತು ಗೌಪ್ಯವಾಗಿ ಇಡಲಾಗುತ್ತದೆ.
- 10 ನಿಮಿಷದಲ್ಲಿ 50+ ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು.
- ತ್ವರಿತವಾಗಿ ನಿಮ್ಮ ಆರೋಗ್ಯದ ವರದಿಯನ್ನು ನೀಡಲಾಗುತ್ತದೆ.
- ಆರೋಗ್ಯಕ್ಕೆ ಅಗತ್ಯವಿರುವ ಆಹಾರದ ಮಾಹಿತಿಯನ್ನು ನೀಡಲಾಗುತ್ತದೆ.
Siddaramaiah ಜನರ ಆರೋಗ್ಯ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಕಲಬುರಗಿ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರೆಯಲಿದೆ.