G20 ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಬಹುನಿರೀಕ್ಷಿತ ನ್ಯೂ ಡೆಲ್ಲಿ ಘೋಷಣೆಗೆ ಸರ್ವಾನುಮತದಿಂದ ಅಂಗೀಕಾರ ದೊರೆತಿದೆ.
ಇದರೊಂದಿಗೆ ವಿಶ್ವವೇದಿಕೆಯಲ್ಲಿ ಭಾರತ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಯುದ್ದೋನ್ಮಾನದ, ಗಡಿ ಅತಿಕ್ರಮಣದಲ್ಲಿ ಮುಳುಗಿರುವ ರಷ್ಯಾ ಮತ್ತು ಚೀನಾಕ್ಕೆ ಪರೋಕ್ಷ ಸಂದೇಶ ನೀಡುವ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಮತ್ತು ವಸುಧೈವ ಕುಟುಂಬಕಂ ತತ್ವಕ್ಕೆ ಅನುಗುಣವಾಗಿ ಸರ್ವರ ಏಳಿಗೆಗೆ ಆದ್ಯತೆ ನೀಡುವ ತನ್ನ ಸಂದೇಶಕ್ಕೆ ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳ ಅನುಮೋದನೆ ಪಡೆದಿದೆ.
G20 ಶೃಂಗಸಭೆಯ 2 ನೇ ಅವಧಿಯಲ್ಲಿ ಮೋದಿ ಅವರು ದಿಲ್ಲಿ ಘೋಷಣೆಗೆ ಅಂಗೀಕಾರ ದೊರೆತ ವಿಚಾರವನ್ನು ಪ್ರಕಟಿಸಿದ್ದಾರೆ. ಇಡೀ ಶೃಂಗಸಭೆಯಲ್ಲಿ ಅತ್ಯಂತ ಮಹತ್ವ ಎಂದು ಪರಿಗಣಿಸಲಾಗಿದ್ದ ಈ ಬೆಳವಣಿಗೆಗೆ ಎಲ್ಲ ವಲಯಗಳಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
