ಭಾರತವು ರಷ್ಯಾ ಜೊತೆಗೆ ಮೂಲಸೌಕರ್ಯ ಹಂಚಿಕೆಯ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಐದು ವರ್ಷಗಳ ಹಿಂದೆಯೇ ಅಮೆರಿಕ ಜೊತೆಗೆ ಇಂತಹ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಚರ್ಚಿಸಲು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಜೊತೆ ಶೃಂಗಸಭೆಯನ್ನು ನಡೆಸಲಿದ್ದಾರೆ.
ಈ ಸಭೆಯಲ್ಲಿ ಸುಮಾರು 10 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ರಕ್ಷಣಾ ಮೂಲಸೌಕರ್ಯ ಹಂಚಿಕೆ ಒಪ್ಪಂದವೂ ಇದರಲ್ಲಿ ಒಂದಾಗಿದೆ.
ಈ ಒಪ್ಪಂದಕ್ಕೆ ಸಹಿ ಮಾಡಿದರೆ, ಭಾರತ ಮತ್ತು ರಷ್ಯಾದ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು ಪರಸ್ಪರ ರಕ್ಷಣಾ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಅವಕಾಶವನ್ನು ಹೊಂದಿದೆ.
ರಷ್ಯಾದ ಕೆಎ 226ಟಿ ಎಚ್ ಎ ಎಲ್ ತುಮಕೂರು ಘಟಕದಲ್ಲಿ ತಯಾರಿಸುವ ಯೋಜನೆ ಕುರಿತು ಇಂದಿಗೂ ಅನಿಶ್ಚಿತ ಸ್ಥಿತಿಯಲ್ಲಿದೆ. ಆದ್ದರಿಂದ ರಷ್ಯಾದಿಂದ ಕೆಲವು ಹೆಲಿಕ್ಯಾಪ್ಟರ್ ಗಳನ್ನು ಖರೀದಿಸುವ ಸಾಧ್ಯತೆ ಇದೆ. 60 ಹೆಲಿಕಾಪ್ಟರ್ ಖರೀದಿ ಹಾಗೂ 200 ಹೆಲಿಕ್ಯಾಪ್ಟರ್ ಗಳನ್ನು ಎಚ್ಎಎಲ್ ನಲ್ಲಿ ತಯಾರಿಸಲಾಗುತ್ತದೆ. ಈ ಒಪ್ಪಂದವನ್ನು ಭಾರತ ಮತ್ತು ರಷ್ಯಾ ಸರ್ಕಾರದ ನಡುವೆ 2015 ರಲ್ಲಿ ನಡೆದಿತ್ತು. ದರ ಹಾಗೂ ಭಾರತದಲ್ಲಿ ತಯಾರಾಗುವ ಹೆಲಿಕ್ಯಾಪ್ಟರ್ ಗಳಲ್ಲಿ ದೇಶಿಯವಾಗಿ ತಯಾರಾದ ಬಿಡಿಭಾಗಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬ ಬಗೆಗಿನ ಭಿನ್ನಭಿಪ್ರಾಯ ಏರ್ಪಟ್ಟಿದ್ದು, ಅದನ್ನು ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ.
ರಕ್ಷಣಾ ಮೂಲಸೌಕರ್ಯ ಹಂಚಿಕೆ ಒಪ್ಪಂದದಿಂದಾಗಿ ಆರ್ಕ್ ಟಿಕ್ ಸಾಗರದಲ್ಲಿ ರಷ್ಯಾ ಹೊಂದಿರುವ ಬಂದರೂ ಸೌಲಭ್ಯವೂ ಭಾರತ ದ ಬಳಕೆಗೆ ದೊರೆಯುತ್ತದೆ. ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗಿದೆ. ಹಾಗಾಗಿ ರಷ್ಯದ ಜೊತೆಗಿನ ಒಪ್ಪಂದದಿಂದ ಭಾರತಕ್ಕೆ ಅನುಕೂಲ ಆಗಲಿದೆ.