Uttaradi Mutt ಮನುಷ್ಯನಿಗೆ ಎಲ್ಲ ಸದ್ಗುಣಗಳೂ ಸಂಪತ್ತು ಇದ್ದಂತೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಲೌಖಿಕವಾಗಿ ಯೋಚಿಸಿದರೆ ಸಂಪತ್ತು ಎಂದರೆ ಕೇವಲ ಹಣ ಮಾತ್ರ. ಅದು ಕೂಡ ಸಂಪತ್ತೇ ಮತ್ತು ಬದುಕಿಗೆ ಅವಶ್ಯಕ. ಆದರೆ ಜ್ಞಾನ, ಭಕ್ತಿ, ವೈರಾಗ್ಯ, ಶಮದಮಾದಿಗಳೂ ಕೂಡ ಅತ್ಯಂತ ಪ್ರಮುಖವಾದ ಸದ್ಗುಣಗಳ ಸಂಪತ್ತು. ಈ ಸಂಪತ್ತುಗಳು ನಮ್ಮನ್ನು ಮೋಕ್ಷದವರೆಗೆ ಕೊಂಡೊಯ್ಯಬಲ್ಲವು ಎಂದರು.
ಪ್ರವಚನ ನೀಡಿದ ಸೌರಭ ವಿದ್ಯಾಲಯದ ಪ್ರಾಚಾರ್ಯರಾದ ಪಂಡಿತ ಪ್ರಮೋದಾಚಾರ್ಯ ಪೂಜಾರ್, ಭಾಗವತ ನವಮ ಸ್ಕಂದ ನವವಿಧ ಭಕುತಿಯ ತಿಳಿಸುವ ಮತ್ತು ನವವಿಧ ದ್ವೇಷವ ಹೇಗೆ ಬಿಡಬೇಕೆಂದು ತಿಳಿಸುವ ಸ್ಕಂದ. ಇಲ್ಲಿ ನಾವು ದೇವರಿಗಿಂತ ರಾಜರ ಮತ್ತು ಋಷಿಗಳ ಬಗ್ಗೆ ಹೆಚ್ಚಾಗಿ ತಿಳಿಸುವ ಸ್ಕಂದ. ಕಾರಣ ಅವರು ಪುಣ್ಯದ ಕೀರ್ತಿಯನ್ನು ಪಡೆದವರು. ದೇವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದವರು ಎಂದರು.
Uttaradi Mutt ಒಬ್ಬೊಬ್ಬ ರಾಜರ ಕಥೆಯೂ ಅದ್ಭುತವಾಗಿದೆ. ನಮಗೆ ದೇವರ ಮೇಲೆ ಭಕ್ತಿ ಬರಬೇಕೆಂದರೆ ದೇವರ ಭಕ್ತರಾದ ರಾಜರಾದ ನಭ, ನರಿಶ್ಯಂತ, ದಿಷ್ಟ, ಮರುತ್ ಮೊದಲಾದವರ ಕಥೆಯನ್ನು ಕೇಳಬೇಕು ಎಂದರು.
ಪಂಡಿತ ಸುರೇಶಾಚಾರ್ಯ ರಾಯಚೂರು ಪ್ರಚವನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿಘಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.