D. Devaraja Arasu ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ನೀಡಿದ ತಾತ್ವಿಕ ಮತ್ತು ಮುತ್ಸದ್ದಿ ರಾಜಕಾರಣಿ ಡಿ.ದೇವರಾಜ ಅರಸು ಅವರ ಚಿಂತನೆ, ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಸ್ಥಳೀಯ ಸಂಘ-ಸoಸ್ಥೆಗಳ ಸಹಯೋಗದೊಂದಿಗೆ ನಗರದ ಕುವೆಂಪು ರಂಗಮoದಿರದಲ್ಲಿ ಏರ್ಪಡಿಸಲಾಗಿದ್ದ ಡಿ.ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸತತವಾಗಿ ಜನಹಿತಕ್ಕಾಗಿಯೇ ದುಡಿದು, ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿಯುವ ವ್ಯಕ್ತಿತ್ವ ಅರಸುರವರದ್ದು. ಅರಸುರವರಿಗಿದ್ದ ಜನಪರ ಕಾಳಜಿ, ಅನುಷ್ಠಾನಕ್ಕೆ ತಂದ ಯೋಜನೆಗಳು ಜನಸಾಮಾನ್ಯರ ಬದುಕಿನ ಚಿತ್ರಣವನ್ನೇ ಶಾಶ್ವತವಾಗಿ ಬದಲಾಗಿಸಿವೆ. ಇಂತಹ ಮಹತ್ವದ ಕಾರ್ಯಕ್ರಮಗಳ ಜಾರಿಯಿಂದಾಗಿ ಅರಸುರವರು ದೇಶಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ಆದ್ದರಿಂದಲೇ ಅವರನ್ನು ಆದರ್ಶವಾದಿಗಳ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ಗುರುತಿಸಲ್ಪಡುತ್ತಾರೆ ಎಂದವರು ನುಡಿದರು.
ನಿಮ್ನ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಕರೆತರುವಲ್ಲಿ ಶ್ರಮಿಸಿದ ಅರಸುರವರು ಜಾರಿಗೊಳಿಸಿದ ಕೂಲಿಗಾಗಿ ಕಾಳು ಯೋಜನೆ ಅಸಾಧಾರಣ ಯೋಜನೆಗಳಲ್ಲೊಂದಾಗಿತ್ತು. ಅರಸುರವರು ಕೇವಲ ಮುತ್ಸದ್ದಿ ರಾಜಕಾರಣಿ ಮಾತ್ರವಾಗಿರದೇ ಅವರು ದೂರದೃಷ್ಠಿಯ ಆಲೋಚನೆ ಉಳ್ಳವರಾಗಿದ್ದರು. ಅಂದಿನ ಜನರ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದ್ದರು ಎಂದರು.
ಅರಸುರವರು ನಾಡಿಗೆ ನೀಡಿದ ಕೊಡುಗೆ ಅಪಾರ ಎಂದ ಅವರು, ಸಾಮಾಜಿಕ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬ ನಾಗರೀಕರಿಗೂ ಉತ್ತಮವಾದ ಮೂಲಭೂತ ಸೌಲಭ್ಯಗಳು ದೊರೆಯುವಂತಾಗಬೇಕೆAಬ ಆಶಯ ಹೊಂದಿದ್ದರು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಧ್ಯಾಪಕ ಬಿ.ಎಲ್.ರಾಜು ಅವರು ಮಾತನಾಡಿ, ಮಾದರಿ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅರಸುರವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಭವಿ಼ಷ್ಯದ ಬದುಕಿನ ನಿರ್ಮಾಣಕ್ಕೆ ಮಾದರಿಗಳು ಇರಬೇಕು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ರ0ತೆ ಅರಸುರವರು ವ್ಯಕ್ತಿಗಳಾಗಿರದೇ ಆದರ್ಶ ವ್ಯಕ್ತಿಗಳಾಗಿ ಕಂಡುಬರುತ್ತಾರೆ. ಸುಂದರ ನಾಳೆಗಳ ನಿರ್ಮಾಣ ಕಾರ್ಯದಲ್ಲಿ ಇಂತಹ ಆದರ್ಶ ವ್ಯಕ್ತಿಗಳು ಮಾದರಿಯಾಗಿ ನಿಲ್ಲುತ್ತಾರೆ ಎಂದರು.
D. Devaraja Arasu ಇoದಿನ ಯುವ ಜನರಿಗೆ ಅನೇಕ ಸಮಸ್ಯೆ-ಸವಾಲುಗಳು ಎದುರಾಗುತ್ತವೆ. ವರ್ತಮಾನದ ಬದುಕನ್ನು ಸಹನೀಯವಾಗಿಸಿಕೊಂಡು ಮುಂದುವರೆಯುವ ಹೊಣೆಗಾರಿಕೆ ಯುವ ಸಮೂಹ ಹಾಗೂ ವಿದ್ಯಾರ್ಥಿಗಳ ಮೇಲಿದೆ. ಅರಸುರವರ ಚಿಂತನೆ-ಆಲೋಚನೆಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಂಡು ಮುಂದೆ ಸಾಗುವ ಅನಿವಾರ್ಯತೆ ಇದೆ ಎಂದರು.
ಇoದಿನ ಆಧುನಿಕ ಯುಗದಲ್ಲೂ ದೇಶದಲ್ಲಿ ಜಾತಿ ಆಧಾರಿತ ವ್ಯವಸ್ಥೆ ಎಲ್ಲೆಲ್ಲೂ ಕಂಡುಬರುತ್ತಿದೆ. ಈ ಜಾತಿ ಪದ್ಧತಿಯ ನಿರ್ಮೂಲನೆಗೆ ದಶಕಗಳು ಕಳೆದಿವೆ. ಯುವಜನತೆ ಇಂತಹ ಅನಿಷ್ಠದಿಂದ ಹೊರಬಂದು ಭವಿಷ್ಯದ ಕನಸುಗಳೊಂದಿಗೆ ಸಾಗುವ ಅಗತ್ಯವಿದೆ ಎಂದರು.
ಸಮಾನತೆ- ಸಹೋದರತೆಯ ಮೇಲೆ ಸಮಾಜ ನಿರ್ಮಿಸುವುದು ಅರಸುರವರ ಕನಸಾಗಿತ್ತು. ಭೂ ಮಾಲೀಕರ ಹಿಡಿತ ತಪ್ಪಿಸಿ, ಭೂರಹಿತರಿಗೆ ಭೂ ಒಡೆತನದ ಹಕ್ಕನ್ನು ನೀಡುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದವರು ಅರಸುರವರು. ಜೀತವಿಮುಕ್ತಿ ಕಾನೂನು ಜಾರಿಗೊಳಿಸಿದ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದಾಗಿ ಎಲ್ಲರೂ ಶಿಕ್ಷಣ ಪಡೆಯುವಂತೆ ಮಾಡಲು ಹಾಸ್ಟೆಲ್‌ಗಳನ್ನು ರಾಜ್ಯದಾದ್ಯಂತ ಆರಂಭಿಸಿದರು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅಡುಗೆ ಸಿಬ್ಬಂಧಿಗಳಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ವಿ.ರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀಮತಿ ಶೋಭಾಓಂಕಾರ್‌ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.