Wednesday, October 2, 2024
Wednesday, October 2, 2024

VISL Factory ಭದ್ರಾವತಿ ವಿಐಎಸ್ಎಲ್ ನಲ್ಲಿ ಸ್ವಾತಂತ್ರ್ಯೋತ್ಸವ

Date:

VISL Factory ಆಗಸ್ಟ್ 15ರಂದು ಸುಸಜ್ಜಿತವಾದ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಸೈಲ್-ವಿಐಎಸ್‌ಎಲ್‌ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವದಿಂದ ಆಚರಿಸಲಾಯಿತು.

ಸೈಲ್-ವಿಐಎಸ್‌ಎಲ್ ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್.ಚಂದ್ವಾನಿ ಮುಖ್ಯ ಅತಿಥಿಯಾಗಿದ್ದರು, ಅವರನ್ನು ಶ್ರೀ ಎಲ್.ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಅವರು ಬರಮಾಡಿಕೊಂಡರು. ಮುಖ್ಯ ಅತಿಥಿಗಳು ತ್ರಿವರ್ಣ ಧ್ವಜವನ್ನು ಹಾರಿಸಿದರು.

ವಿಐಎಸ್‌ಎಲ್ ಸೆಕ್ಯುರಿಟಿ, ಸರ್.ಎಮ್.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್.ಸಿ.ಸಿ, ಭದ್ರಾವತಿಯ ವಿವಿಧ ಪ್ರೌಢಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಂದ ಪಥಸಂಚಲನ, ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ಹಾಗೂ ದೇಶಭಕ್ತಿಗೀತೆಗಾಯನ ನಂತರ ಬಾಲಭಾರತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶ್ರೀ ಬಿ.ಎಲ್. ಚಂದ್ವಾನಿರವರು ಕವಾಯತ್ತನ್ನು ವೀಕ್ಷಿಸಿ, ಪಥಸಂಚಲನ ತಂಡಗಳಿoದ ಗೌರವ ವಂದನೆ ಸ್ವೀಕರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತರಂಗ ಶಾಲೆ ಮತ್ತು ಭದ್ರಾವತಿ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ವಿಐಎಸ್‌ಎಲ್ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

MyGov.in ಆಯೋಜಿಸಿದ್ದ ರಾಷ್ಟ್ರೀಯ ಪೋಸ್ಟರ್ ವಿನ್ಯಾಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ನಮ್ಮ ಕಾರ್ಖಾನೆಯ ನೀರು ಸರಬರಾಜು ಇಲಾಖೆಯ ಶ್ರೀ ಜೆ.ನಾಗೇಂದ್ರ ಅವರ ಪುತ್ರಿ ಕುಮಾರಿ ಶ್ರೇಯಾ ಎನ್. ಗೌಡ ಹಾಗೂ ಕುವೆಂಪು ವಿಶ್ವವಿದ್ಯಾನಿಲಯವು ದೂರಶಿಕ್ಷಣ ಕ್ರಮದಲ್ಲಿ ನಡೆಸಿದ ಪದವಿ ಕಲಾವಿಭಾಗದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ನಮ್ಮ ಕಾರ್ಖಾನೆಯ ಪ್ರಯೋಗಾಲಯ ವಿಭಾಗದ ಮೇಲ್ವಿಚಾರಕರಾದ ಶ್ರೀ ಎಲ್. ಮಧುಕುಮಾರ್ ರವರ ಪತ್ನಿ ಶ್ರೀಮತಿ ಎಚ್.ಎಮ್.ಪುಷ್ಪಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

VISL Factory ಮುಖ್ಯ ಅತಿಥಿಗಳು ವಿಐಎಸ್‌ಎಲ್ ಸೆಕ್ಯುರಿಟಿ, ಎನ್.ಸಿ.ಸಿ, ಸ್ಕೌಟ್ಸ್, ಹಿರಿಯ ಅಧಿಕಾರಿಗಳು, ವಿಐಎಸ್‌ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳೊಂದಿಗೆ ಕುಶಲೋಪರಿ ವಿಚಾರಿಸಿದರು.

‘ಹರ್ ಘರ್ ತಿರಂಗ’ ಅಭಿಯಾನದ ಅಂಗವಾಗಿ ವಿಐಎಸ್‌ಎಲ್ ಮುಖ್ಯ ದ್ವಾರದ ಬಳಿ ಸ್ಥಾಪಿಸಿದ್ದ ಸೆಲ್ಫಿ ಪಾಯಿಂಟ್, 13ರಿಂದ 15ರ ಅಗಸ್ಟ್ 2023ರ ಅವಧಿಯಲ್ಲಿ ಭದ್ರಾವತಿ ನಾಗರೀಕರನ್ನು ಆಕರ್ಷಿಸಿತು.

ವಿಐಎಸ್‌ಎಲ್ ಸಮುದಾಯ ಮತ್ತು ಕುಟುಂಬ ಸದಸ್ಯರು ಈ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿ, www.harghartiranga.com ನಲ್ಲಿ ತ್ರಿವರ್ಣದೊಂದಿಗೆ ತಮ್ಮ ಸೆಲ್ಫಿ ಪೋಟೊಗಳನ್ನು ಅಪ್‌ಲೋಡ್ ಮಾಡಿ ಸರ್ಟಿಫಿಕೇಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮವನ್ನು ಶ್ರೀ ಇಳಯರಾಜ, ಸಹಾಯಕ ಮಹಾ ಪ್ರಬಂಧಕರು (ಹಣಕಾಸು) ನಿರೂಪಿಸಿದರು. ಮತ್ತು ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕ, ಟ್ರಾಫಿಕ್, ನಗರಾಡಳಿತ ಮತ್ತು ಭದ್ರತಾ ಇಲಾಖೆಗಳು ಸಂಯೋಜಿಸಿದ್ದ ಈ ಕಾರ್ಯಕ್ರಮ ನೆರೆದಿದ್ದ ಜನಸಮೂಹದಲ್ಲಿ ದೇಶಭಕ್ತಿ ಮತ್ತು ದೇಶಪ್ರೇಮವನ್ನು ಮೂಡಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...