Saturday, April 26, 2025
Saturday, April 26, 2025

Uttaradi Math ಮಳಖೇಡದಲ್ಲೇ ಶ್ರೀಜಯತೀರ್ಥರ ಮೂಲ ಬೃಂದಾವನ- ಶ್ರಿಸತ್ಯಾತ್ಮ ತೀರ್ಥರು

Date:

Uttaradi Math ಹೊಳೆಹೊನ್ನುರಿನಲ್ಲಿ 28ನೇ ಚಾತುರ್ಮಾಸ್ಯದ ವ್ರತದಲ್ಲಿರುವ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಶ್ರೀ ಜಯವರ್ಯ ಸಭಾಂಗಣದ ಮುಖ್ಯ ವೇದಿಕೆಯಲ್ಲಿ ಶಿವಮೊಗ್ಗದ ಸಮೀರ ಸಮೂಹ ತಂಡ ಪ್ರಸ್ತುತಪಡಿಸಿದ ಕಾಗಿನಿ ತಟವಾಸ ಎಂಬ ನಾಟಕವನ್ನು ಸಂಪೂರ್ಣವಾಗಿ ವೀಕ್ಷಿಸಿದರು.

ಶ್ರೀ ಜಯತೀರ್ಥರ ಕುರಿತಾದ ಈ ನಾಟಕವನ್ನು ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ದಿವಾನರಾದ ಕೂಡಲಿ ಶ್ರೀಧರಾಚಾರ್ಯ ಅವರು ರಚಿಸಿ ನಿರ್ದೇಶಿಸಿದ್ದರು.

ಶ್ರೀಪಾದಂಗಳವರ ಉಪಸ್ಥಿತಿಯ ಸಲುವಾಗಿ ನಾಟಕದಲ್ಲಿ ಸ್ತ್ರೀ ಪಾತ್ರವೇ ಬಾರದಂತೆ ವಿಶೇಷವಾಗಿ ನಿರ್ದೇಶನ ಮಾಡಲಾಗಿತ್ತು.

ಸುಮಾರು 25ಕಲಾವಿದರು ನಾಟಕದಲ್ಲಿ ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಪ್ರೇಕ್ಷಕರು ನಾಟಕ ವೀಕ್ಷಿಸಿದರು.
ಕಲೆಯ ಮೂಲಕ ತತ್ವಜ್ಞಾನ :
ನಂತರ ಆಶೀರ್ವಚನ ನೀಡಿದ ಶ್ರೀ ಸತಾತ್ಮ ತೀರ್ಥರು, ಶ್ರೀ ಜಯತೀರ್ಥರ ಸ್ಮರಣೆ ನಮಗೆ ನಿತ್ಯದಲ್ಲಿ ಬರಬೇಕು. ಜಯತೀರ್ಥರ ಬದುಕಿನ ತಿಳುವಳಿಕೆ ಮತ್ತು ಬರಹದ ಅಧ್ಯಯನದ ಯೋಗ್ಯತೆ ಎಲ್ಲರದ್ದಾಗಬೇಕು ಎಂದರು.

ಶ್ರೀ ಜಯತೀರ್ಥರು ಕಾನಿತಟವಾಸರೇ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆನೂಚಾನವಾಗಿ ಶ್ರೀ ಜಯತೀರ್ಥರ ಬೃಂದಾವನ ಮಳಖೇಡದಲ್ಲೇ ಇದೆ ಎಂಬುದು ಸತ್ಯವಾದ ವಿಚಾರ. ದಾಸರಾಯರೂ ಇದನ್ನು ಧೃಢೀಕರಿಸಿದ್ದಾರೆ. ಜ್ಞಾನಿಗಳು ಕೂಡ ಜಯತೀರ್ಥರನ್ನು ಮಳಖೇಡದಲ್ಲಿಯೇ ವಣ ðಸಿದ್ದಾರೆ. ಈ ಬಗ್ಗೆ ಗೊಂದಲ ಸೃಷ್ಟಿ ಮಾಡಿರುವುದು ಅನಗತ್ಯ ಎಂದರು.

ಇತಿಹಾಸದ ಬಗ್ಗೆ ಜ್ಞಾನ ಮೂಡಿಸುವ ಇಂತಹ ನಾಟಕಗಳು ಇಂದಿಗೆ ತುಂಬಾ ಅಗತ್ಯ ಇದೆ. ಕಲೆಯ ಮೂಲಕ ತತ್ವಜ್ಞಾನದ ಪ್ರಸಾರ ಮಾಡುತ್ತಿರುವ ಕೂಡಲಿ ಶ್ರೀಧರಾಚಾರ್ಯರ ಈ ಪ್ರಯತ್ನ ಶ್ಲಾಘನೀಯ. ಇದು ನಿರಂತರವಾಗಿರಲಿ. ಸತ್ಯವಾದ ಜ್ಞಾನವನ್ನು ಜಗತ್ತಿಗೆ ಅವರ ತಂಡ ನೀಡುವಂತಾಗಲಿ ಎಂದರು.
Uttaradi Math ನ0ತರ ನಡೆದ ವಿದ್ವತ್ ಸಭೆಯಲ್ಲಿ ಪಂಡಿತ ಹರೀಶಾಚಾರ್ಯ ಆರಣ , ವಾದಿರಾಜಾಚಾರ್ಯ ತಡಕೊಡ, ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಕೆ.ಎನ್. ಗುರುರಾಜ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಅನಿಲ್ ರಾಮಧ್ಯಾನಿ, ಮುರಳಿ, ಧೃವಾಚಾರ್, ಗೋಪೀನಾಥ ನಾಡಿಗ್, ಗುರುರಾಜ ಕಟ್ಟಿಘಿ, ಶ್ರೀನಾಥ ನಗರಗದ್ದೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...

Dr. Rajkumar ಡಾ.ರಾಜ್ ಅವರಿಗಿದ್ದಷ್ಟು ಅಭಿಮಾನಿಗಳು ಬೇರೆ ಯಾವ ನಟರಿಗೂ ಇಲ್ಲ: ವಿ.ಮೂರ್ತಿ

Dr. Rajkumar ವರನಟ ನಟಸಾರ್ವಭೌಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್...

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...