Saturday, November 23, 2024
Saturday, November 23, 2024

Independence Day ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಣೆ

Date:

Independence Day ಚಿಕ್ಕಮಗಳೂರು ನಗರದ ಗೌರಿಕಾಲುವೆ ಸಮೀಪ ನೂರಾನಿ ಮಸೀದಿಯ ಮುಂಭಾಗದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಗಳವಾರ ಮಸೀದಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಖಾನ್ ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಿದರು.
ಇದೇ ವೇಳೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿ ಸಮಿತಿ ಉಪಾಧ್ಯಕ್ಷ ನದೀಂ ಪಾಷ, ಕಾರ್ಯದರ್ಶಿ ಅಮ್ಜದ್ ಖಾನ್, ಖಜಾಂಚಿ ಅಶ್ವಾಕ್ ಅಹಮ್ಮದ್, ಮುಖಂಡ ಮುನ್ನಭಾಯ್ ಸದಸ್ಯರು ಗಳು, ಮದ್ರಸದ ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ಹಾಜರಿದ್ದರು.

ಚಿಕ್ಕಮಗಳೂರು ನಗರದ ಜೆಡಿಎಸ್ ಕಚೇರಿ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಂಗಳವಾರ ಪಕ್ಷದ ಉಪಾಧ್ಯಕ್ಷ ಹೆಚ್.ಪಿ.ಲಕ್ಷ್ಮಣಗೌಡ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಮುಖಂಡರುಗಳಾದ ಹೆಚ್. ಎಸ್.ಮಂಜಪ್ಪ, ಶ್ರೀದೇವಿ, ಆನಂದೇಗೌಡ, ಇರ್ಷಾದ್, ಮೂರ್ತಿ ಮತ್ತಿತರರು ಹಾಜರಿದ್ದರು.

Independence Day ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ. ಸಮೀಪ ವಂದೇ ಮಾತರಂ ಆಟೋ ನಿಲ್ದಾಣ ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ೭೭ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಹೆಚ್.ಡಿ.ತಮ್ಮಯ್ಯ ಬ್ರಿಟಿಷರ್ ಕಪಿಮುಷ್ಠಿಯಿಂದ ಇಂದು ಭಾರತಕ್ಕೆ ಸ್ವಾತಂತ್ರ್ಯ ದೊರ ಕಿದ ಐತಿಹಾಸಿಕ ದಿನವಾಗಿದೆ. ಪ್ರತಿಯೊಬ್ಬ ಭಾರತೀಯರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಬೇಕು. ದೇಶಕ್ಕಾಗಿ ತ್ಯಾಗ ಮಾಡಿದ ಹೋರಾಟಗಾರರಿಗೆ ಸ್ಮರಿಸುವಂತಾಗಬೇಕು ಎಂದು ಹೇಳಿದರು.
ರಾಷ್ಟ್ರಗೀತೆ, ದೇಶಭಕ್ತಿಗೀತೆಗಳ ಮೊಳಗುವಿಕೆಯೊಂದಿಗೆ ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿ ಸಲು ನೆತ್ತರು ಹರಿಸಿದ ಮಹಾನ್ ನಾಯಕರನ್ನು ಸ್ಮರಿಸಿ, ಅವರ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯನ್ನು ಕೊಂಡಾಡುವ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು ಎಂದು ಹೇಳಿದರು.
ವಂದೇ ಮಾತರಂ ಆಟೋ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ ಸಂಘದ ವತಿಯಿಂದ ಎರಡು ದಶಕ ಗಳ ಅಧಿಕ ಕಾಲ ದೇಶ ಹಾಗೂ ನಾಡಿನ ಹಿರಿಮೆಯನ್ನು ಪ್ರತಿಬಿಂಬಿಸುವ ದಿನಾಚರಣೆಗಳನ್ನು ಆಟೋ ಚಾಲಕರ ಸಹಭಾಗಿತ್ವದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ವಾಲ್ಮೀಕಿ ಯುವಕರ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಮಾತನಾಡಿ ಭಾರತ ದೇಶ ಅತ್ಯಂತ ಪುಣ್ಯಭೂಮಿ. ಪ್ರಪಂಚದಲ್ಲೇ ಭಾರತ ವಿವಿಧ ಧರ್ಮಗಳು, ನೂರಾರು ಭಾಷೆಗಳನ್ನು ಒಳಗೊಂಡಿರುವ ದೇಶಕ್ಕೆ ಸ್ವಾತಂತ್ರö್ಯ ಪಡೆದು ಕೊಂಡ ದಿನವಾಗಿದೆ. ಇದನ್ನು ದೇಶದ ಪ್ರತಿಯೊಬ್ಬ ನಾಗರೀಕರು ಸ್ವಾತಂತ್ರ್ಯವಾಗಿ ಎಲ್ಲೆಡೆ ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷ ಉಮೇಶ್, ಸಂಚಾಲಕ ವೆಂಕಟೇಶ್, ನಗರ ಆಟೋ ಸಂಘದ ಅಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ನಗರಸಭಾ ಸದಸ್ಯ ದಿನೇಶ್, ಚಾಲಕರಾದ ವೆಂಕಟೇಶ್, ಲೋಕೇಶ್, ಉಮೇಶ್, ಅಶ್ವಥ್, ಅಬ್ಬಾಸ್, ಕಾಂಗ್ರೆಸ್ ಮುಖಂಡರುಗಳಾದ ನಯಾಜ್, ಎಸ್.ಟಿ. ಸೋಮಶೇಖರ್ ಮತ್ತಿತರರು ಹಾಜರಿದ್ದರು.

ಚಿಕ್ಕಮಗಳೂರು ಶಾಂತಿನಗರ ಕಲ್ಲುದೊಡ್ಡಿ ಸಮೀಪ ಹೆಚ್.ಕೆ.ಜೆ.ಎಂ. ಮಸೀದಿಯಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಗಳವಾರ ಮಸೀದಿ ಕಮಿಟಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮುನೀರ್ ಅಹ್ಮದ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಸೀದಿ ಗುರುಗಳಾದ ಆಶ್ರಫ್ ಲತೀಫ್, ಶಿಕ್ಷಕ ಅಬ್ಬೂಕ್ಕರ್ ಸಿದ್ದಿಕ್ ಲತೀಪಿ, ಕಮಿಟಿ ಕಾರ್ಯದರ್ಶಿ ಅಹ್ಮದ್ ಶರೀಫ್, ಎಸ್‌ವೈಎಸ್ ಅಧ್ಯಕ್ಷ ಹುಸೇನ್, ಕೆ.ಎಂ.ಜೆ ಅಧ್ಯಕ್ಷ ಉಸ್ಮಾನ್, ಎಸ್‌ಎಸ್‌ಎಫ್ ಅಧ್ಯಕ್ಷ ಹತಉಲ್ಲಾ, ಹೆಚ್.ಕೆ.ಜೆ.ಎನ್. ಅಧ್ಯಕ್ಷ ಅಶೀಕ್ ಹಾಗೂ ಎಸ್.ಬಿ.ಎಸ್. ಮದ್ರಸ ವಿದ್ಯಾರ್ಥಿಗಳು ಹಾಜ ರಿದ್ದರು.

ಚಿಕ್ಕಮಗಳೂರು ನಗರದ ಆಜಾದ್‌ಪಾಕ್ ವೃತ್ತದಲ್ಲಿ ಡಾ|| ರಾಜ್‌ಕುಮಾರ್ ಅಭಿಮಾನಿಗಳ ಸಂಘದಿAದ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಂಗಳವಾರ ಸಂಘದ ಅಧ್ಯಕ್ಷ ಓಂಕಾರೇಗೌಡ ಧ್ವಜಾರೋ ಹಣ ನೆರವೇರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಡಾ.ರಾಜ್ ಸಂಘದ ಉಪಾದ್ಯಕ್ಷರಾದ ಕೋಟೆ ವಿನಯ್, ಏಕಾಂತರಾಮು, ಕಾರ್ಯಾಧ್ಯಕ್ಷ ನವೀನ್‌ಕೋಟೆ, ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಸವರಾಜ್, ಮುಖಂಡ ಗವನಹಳ್ಳಿ ಮಂಜು ಮತ್ತಿತರರು ಹಾಜರಿದ್ದರು.

ಚಿಕ್ಕಮಗಳೂರು ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಲಿಮಿಡೆಟ್ ವತಿ ಯಿಂದ ನಗರದ ಎಂ.ಜಿ.ರಸ್ತೆಯ ಸೊಸೈಟಿ ಕಟ್ಟಡದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಅಧ್ಯಕ್ಷ ಬಿ.ಎನ್. ರಾಜಣ್ಣಶೆಟ್ಟಿ ಮಂಗಳವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಎಂ.ಮಲ್ಲೇಶ್, ನಿರ್ದೇಶಕರುಗಳಾದ ಸಿ.ಆರ್.ಕೇಶವಮೂರ್ತಿ, ಬಿ.ಎಸ್.ಪ್ರಶಾಂತ್, ಸಿ.ಆರ್.ಗಂಗಾಧರ್, ಕಾರ್ಯದರ್ಶಿ ಗಾಯತ್ರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಬಾಳೆಹೊನ್ನೂರಿನ ಗೋವಿಗೆ ಸಿಹಿತಿನಿಸುವ ಮೂಲಕ ಕಡವಂತಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಬೊಗಸೆ ತಮ್ಮ ನಿವಾಸದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.
ಬಳಿಕ ಮಾತನಾಡಿದ ಅವರು ಗೋವುಗಳು ದೇಶದ ಹಾಗೂ ರೈತರ ಬೆನ್ನೆಲುಬಾಗಿದೆ, ಗೋವುಗಳಿದ್ದರೆ ಮಳೆ ಬೆಳೆ ಕೃಷಿ ಸಾಧ್ಯವಿದೆ. ಸ್ವತಂತ್ರದ ಸಂದರ್ಭದಲ್ಲಿ ಗೋವುಗಳು ಹಾಗೂ ಹಲವು ಪ್ರಾಣ ಗಳಿಂದ ಸಹಾಯವಾಗಿದೆ. ಗೋವುಗಳಿಗೆ ಹಾಗೂ ಪ್ರಾಣ ಗಳಿಗೆ ಪ್ರಕೃತಿ ಮಾತೆಗೆ ಗೌರವ ಕೊಡುವುದು ಹಾಗೂ ರಕ್ಷಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ವನಿತಾ ಶೇಖರ್, ಹೂವಮ್ಮ, ಸಾವಿತ್ರಿ, ಗ್ರಾಮಸ್ಥ ರಾದ ತೀರ್ಥೇಶ್, ಗಗನ್, ಕಲಾ, ದಾನಪ್ಪ ಉಪಸ್ಥಿತರಿದ್ದರು.

ಚಿಕ್ಕಮಗಳೂರು ನಗರದ ಎಎಪಿ ಕಚೇರಿಯಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾ ರೋಹಣವನ್ನು ಪಕ್ಷದ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್ ಮಂಗಳವಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ, ಮುಖಂಡರುಗಳಾದ ಸೈಯದ್ ಜಮೀಲ್ ಅಹ್ಮದ್, ಅಂತೋಣ , ಪ್ರಭು, ಜಲೀಲ್, ನಾಸೀರ್ ಬೇಗಂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...