ಕೋವಿಡ್ – 90 ಬಿಕ್ಕಟ್ಟಿನ ನಂತರ ದೇಶದಲ್ಲಿ ವ್ಯಾಪಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಡಿಜಿಟಲೀಕರಣ ಕಂಡುಬರುತ್ತಿದೆ. ಕೌಶಲ್ಯವಿರುವ ಟೆಕ್ಕಿಗಳಿಗೆ ಬೇಡಿಕೆ ಉಂಟಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಐಟಿ, ಬಿಪಿಒ ವಲಯದಲ್ಲಿ ದುಡಿಯುವ ವೃತ್ತಿಪರರ ಸಂಖ್ಯೆ 80 ಲಕ್ಷದಿಂದ ಒಂದು ಕೋಟಿಗೆ ಏರಿಕೆಯಾಗಲಿದೆ.
ಸ್ಟಾರ್ಟಪ್ ಗಳೂ ಭವಿಷ್ಯದ ದಿನಗಳಲ್ಲಿ ವಿಪುಲ ಉದ್ಯೋಗಾವಕಾಶವನ್ನೂ ಸೃಷ್ಟಿಸಲಿದೆ. ಈಗ 45 ಲಕ್ಷ ಮಂದಿ ಐಟಿ, ಬಿಪಿಒ ವಲಯದಲ್ಲಿ ದುಡಿಯುತ್ತಿದ್ದಾರೆ.
ಈ 45 ಲಕ್ಷ ಮಟ್ಟಕ್ಕೆ ಬರಲು 14ವರ್ಷ ಬೇಕಾಗಿದೆ. ಆದರೆ ಇನ್ನು ಕೆಲವು ವರ್ಷಗಳಲ್ಲಿ ಅಥವಾ ದಶಕದಲ್ಲಿ ಇದು ಇಮ್ಮಡಿ ಆಗಬಹುದು ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ಅವರು ತಿಳಿಸಿದ್ದಾರೆ.
ತಂತ್ರಜ್ಞಾನ ವಲಯದ ಕಂಪನಿಗಳು ಬಿಡಿಭಾಗಗಳ ಉತ್ಪಾದನೆ, ಸಾರಿಗೆ, ಆಹಾರ , ರಿಟೇಲ್ ವಲಯದಲ್ಲಿ ಹೇರಳ ಉದ್ಯೋಗವಕಾಶ ಸೃಷ್ಟಿಸುತ್ತಿವೆ ಎಂದರು. ಯುಪಿಐ ಪೇಮೆಂಟ್ ಪದ್ಧತಿಯನ್ನು 2016ರ ಮೇ ನಲ್ಲಿ ಆರಂಭಿಸಲಾಯಿತು. 2016ರ ಅಕ್ಟೋಬರ್ ವೇಳೆಗೆ 1 ಲಕ್ಷ ವರ್ಗಾವಣೆ ನಡೆದಿತ್ತು. ಕಳೆದ ಅಕ್ಟೋಬರ್ ನಲ್ಲಿ 403 ಕೋಟಿ ವರ್ಗಾವಣೆಗಳು ನಡೆದಿವೆ. ವರ್ಗಾವಣೆಯು ಮೌಲ್ಯ 100 ಶತಕೋಟಿ ಡಾಲರ್ ಗೆ ಜಿಗಿದಿದೆ ಎಂದರು.
ಡಿಜಿಟಲೀಕರಣ ಹಾಗೂ ಯುಪಿಐ ಪೇಮೆಂಟ್ ಪದ್ಧತಿಯಿಂದ ಭವಿಷ್ಯದಲ್ಲಿ ಕಿರಾಣಿ ಸ್ಟೋರ್ ಗಳಿಗೂ ಸಾಲ ಸೌಲಭ್ಯ ಸಿಗಲಿದೆ. ಇದು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಎಲ್ಲೆಡೆ ಡಿಜಿಟಲೀಕರಣ ಜನಪ್ರಿಯವಾಗುತ್ತಿದೆ – ನಂದನ್ ನಿಲೇಕಣಿ
Date: