ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರಕ್ಕೆ ಹಲವಾರು ಯಂತ್ರಗಳು ಕೊಡುಗೆಯಾಗಿವೆ. ಹಳ್ಳಿಗಳಲ್ಲಿ ಕೃಷಿ ಯಂತ್ರಗಳ ಸದ್ದು ಹೆಚ್ಚಾಗಿದ್ದು ಬಹುತೇಕ ರೈತರು ಯಂತ್ರಗಳನ್ನೇ ಅವಲಂಬಿಸಿದ್ದಾರೆ.
ಕೂಲಿ ಆಳುಗಳ ಸಮಸ್ಯೆ, ಪ್ರಕೃತಿ ವೈಪರೀತ್ಯ, ಸೇರಿದಂತೆ ಹಲವಾರು ಸಮಸ್ಯೆಗಳಿಂದ ಪಾರಾಗಲು ಮಲೆನಾಡು ಭಾಗದಲ್ಲಿ ರೈತರು ಕೃಷಿ ಯಂತ್ರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈ ವರ್ಷ ಪ್ರಕೃತಿ ರೈತರಿಗೆ ಕೈ ಕೊಟ್ಟಿದ್ದು ಅಡಿಕೆ ಸಂಸ್ಕರಣ ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಸಿದೆ. ಈ ಬಾರಿ ಕೃಷಿ ಯಂತ್ರಗಳ ಸಂಶೋಧಕ ಕುಂಟವಳ್ಳಿ ವಿಶ್ವನಾಥ್ ಹೊಸ ಯಂತ್ರದ ಮೂಲಕ ರೈತರ ಕೈಹಿಡಿದಿದ್ದಾರೆ. ಈಗ ಅವರು ಸರಳ ತಾಂತ್ರಿಕತೆಯ ಹೊಂದಿದ ಹಣ್ಣಡಕೆ ಸುಲಿಯುವ ಯಂತ್ರವನ್ನು ಸಂಶೋಧಿಸಿ ಸಿದ್ಧಪಡಿಸಿದ್ದಾರೆ.
ಈ ಯಂತ್ರವು ಕಣ್ಣಡಕೆಯನ್ನು ಅತೀ ನಾಜೂಕಿನಿಂದ ಸುಲಿಯುವ ಸಾಮರ್ಥ್ಯವನ್ನು ಹೊಂದಿದೆ. ಎಂಟು ಕೆಜಿ ತೂಕದ ಕಣ್ಣಡಕೆಯನ್ನು ಸಿಪ್ಪೆ ಸಮೇತ ಎಂಟರಿಂದ ಹತ್ತು ನಿಮಿಷದಲ್ಲಿ ಸುಲಿಯುವ ನೈಪುಣ್ಯತೆ ಯಂತ್ರದ್ದಾಗಿದೆ. ಶೇ. 95ರಷ್ಟು ಹಣ್ಣಡಕೆ ರಾಶಿ ಇಡಿ ಅಡಿಕೆಯನ್ನಾಗಿಸುವ ಸಾಮರ್ಥ್ಯ ಯಂತ್ರಕ್ಕಿದೆ.
ಹಣ್ಣಡಕೆ ಸುಲಿಯುವ ಯಂತ್ರ ಚಿಕ್ಕದಾಗಿದ್ದು ರೈತರಿಗೆ ಉಪಯುಕ್ತ ಲಾಭಗಳಿವೆ. ಯಂತ್ರ ಸಂಶೋಧನೆಯಿಂದ ಹಣ್ಣಡಕೆ ಸುಲಿಯುವ ಚಿಂತೆ ರೈತರಿಗೆ ಈಗ ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ರಾಷ್ಟ್ರೀಯ ಅಡಿಕೆಗೆ ಉತ್ತಮ ಧಾರಣೆ ಇದ್ದು, ಹಣ್ಣಡಿಕೆ ಸುಲಿಯುವ ಯಂತ್ರ ಬಳಸಿದರೆ ಅತಿ ಹೆಚ್ಚು ಲಾಭ ಗಳಿಸಬಹುದಾದ ಅವಕಾಶ ರೈತರಿಗಿದೆ.
ಅಡಕೆ ಸುಲಿಯಲು ಸುಲಭ ಸಾಧನ ಶಿಲ್ಪಿ: ವಿಶ್ವನಾಥ್
Date: