Workers Welfare Development Union Association ಆರ್ಥಿಕ ಅಶಕ್ತರಾಗಿರುವ ಅಡುಗೆ ವೃತ್ತಿಯಲ್ಲಿರುವ ಸಂಘದ ಸದಸ್ಯರುಗಳ ಅನುಕೂಲಕ್ಕಾಗಿ ಸೂಕ್ತ ಜಾಗ ಗುರುತಿಸಿ ನಿವೇಶನ ಒದಗಿಸುವ ಮೂಲಕ ಸಂಘದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃಧ್ದಿ ಯೂನಿಯನ್ ಸಂಘದ ವತಿಯಿಂದ ಶನಿವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ನಗರ ಮಟ್ಟದಲ್ಲಿ ಜಾಗದ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ನಗರ ಹೊರವಲಯದ ನಿವೇಶನವನ್ನು ಒದಗಿಸಿಕೊಡ ಲಾಗುವುದು. ಇದಕ್ಕೆ ಸಂಘದ ಸದಸ್ಯರುಗಳ ಸಹಕಾರ ಅವಶ್ಯಕತೆಯಿದೆ ಎಂದರು.
ಅಡುಗೆ ಕೆಲಸಗಾರರ ಸಂಘವು ಸ್ಥಾಪನೆಯಾದ ವೇಳೆಯಲ್ಲಿ ತಾವು ನಗರಸಭಾ ಅಧ್ಯಕ್ಷರಾಗಿ ಕಾರ್ಯನಿರ್ವ ಹಿಸಲಾಗಿತ್ತು. ಇದೀಗ ಶಾಸಕರಾಗಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. ಇಂತಹ ಅವಕಾಶವನ್ನು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಸಂಘದ ಬೆಳವಣ ಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ನಗರಮಟ್ಟದಲ್ಲಿ ಜಾಗದ ಕೊರತೆಯಿರುವ ಹಿನ್ನೆಲೆಯಲ್ಲಿ ಸಿಎ ನಿವೇಶನವನ್ನು ಒದಗಿಸಲಾಗುವುದು. ಇದರಲ್ಲಿ ಸಂಘವು ಶೇ.50 ರಷ್ಟು ಹಣವನ್ನು ಭರಿಸಿದರೆ ಸೂಕ್ತ ನಿವೇಶನ ಗುರುತಿಸಬಹುದು. ಸಂಘದ ಮುಖಂಡರುಗಳು ಯಾವುದಾದರೂ ಜಾಗ ಗುರುತಿಸಿದ್ದಲ್ಲಿ ಅಧಿಕಾರಿಗಳು ಅಥವಾ ತಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು.
Workers Welfare Development Union Association ಸಂಘದ ಅಧ್ಯಕ್ಷ ಆನಂದ್ ಮಾತನಾಡಿ ಅಡುಗೆ ಕೆಲಸಗಾರರ ಸಂಘವು ಸ್ಥಾಪನೆಯಾಗಿ 12 ವರ್ಷಗಳು ಕಳೆದಿದ್ದು ಸುಮಾರು ಜಿಲ್ಲಾದ್ಯಂತ 3000 ಮಂದಿ ಸದಸ್ಯರನ್ನು ಹೊಂದಿದ್ದಾರೆ.
ಆದರೆ ಇಲ್ಲಿಯವರೆಗೂ ಸಂಘಕ್ಕೆ ಸ್ವಂತ ನಿವೇಶನ ಇಲ್ಲದಿರುವ ಪರಿಣಾಮ ತೀವ್ರ ತೊಂದರೆಯಾಗಿದೆ ಎಂದರು.
ಇದೀಗ ಬಾಡಿಗೆ ಕಟ್ಟಡದಲ್ಲಿ ಸಂಘದ ಕಾರ್ಯಚಟುವಟಿಕೆಯನ್ನು ನಡೆಸಲಾಗುತ್ತಿದೆ. ಆದರೆ ಸಂಘದ ಸದಸ್ಯ ರುಗಳು ಸಭೆ, ಸಮಾರಂಭ ನಡೆಸಲು ತೀವ್ರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ನಗರ ಅಥವಾ ಹೊರ ವಲಯದಲ್ಲಿ ಸೂಕ್ತ ಜಾಗ ಗುರುತಿಸಿ ನಿವೇಶನ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘು, ಖಜಾಂಚಿ ಈರಣ್ಣ, ತಾಲ್ಲೂಕು ಅಧ್ಯಕ್ಷ ಶ್ಯಾಮಣ್ಣ, ಸದಸ್ಯರುಗಳಾದ ಬಸವರಾಜ್, ನಿಂಗೇಶ್, ಮೂರ್ತಿ, ರಾಮಚಂದ್ರ, ಶಿವು, ರುಕ್ಮಿಣ , ರಾಜು, ಶ್ರೀಕಾಂತ್, ಕಿಟ್ಟಿ, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.