Thursday, June 12, 2025
Thursday, June 12, 2025

Uttaradi Muth ವೇದವ್ಯಾಸರ ಮಾನಸ ಸರೋವರದ ಕಮಲವೇ ಭಾಗವತ.ಅದರ ಭ್ರಮರವೇ ಸತ್ಯಧರ್ಮರು

Date:

Uttaradi Muth ಹೊಳೆಹೊನ್ನೂರು ವೇದವ್ಯಾಸ ದೇವರ ಮಾನಸ ಸರೋವರದಲ್ಲಿ ಉತ್ಪನ್ನವಾದ ಶ್ರೀಮದ್ ಭಾಗವತವೆಂಬ ಕಮಲದಲ್ಲಿ ಶ್ರೀ ಸತ್ಯಧರ್ಮ ತೀರ್ಥರೆಂಬ ಭ್ರಮರಕ್ಕೆ ತೃಪ್ತಿಯೇ ಇಲ್ಲ. ಅಷ್ಟು ಆ ಭಾಗವತವನ್ನು ಅನುಭವಿಸಿ ಅವರು ವ್ಯಾಖ್ಯಾನ ಮಾಡಿದ್ದಾರೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ಭಾಗವತ ಗ್ರಂಥದ ಪ್ರತಿ ಶಬ್ದವನ್ನೂ ಅನುಭವಿಸಿ ಅದಕ್ಕೆ ವ್ಯಾಖ್ಯಾನ ಮಾಡಿದ್ದಾರೆ ಸತ್ಯಧರ್ಮರು. ಅಷ್ಟೇ ಅಲ್ಲದೆ ಶ್ರೀ ಜಯತೀರ್ಥರ ಶ್ರೀಮನ್ನ್ಯಾಂಯಸುಧಾ ಗ್ರಂಥವನ್ನು ಸ್ವಹಸ್ತದಿಂದ ಅತ್ಯಂತ ಸುಂದರವಾಗಿ ಬರೆದಿದ್ದಾರೆ. ಒಂದು ಪ್ರತಿ ಶ್ರೀಮಠದಲ್ಲಿ ಮತ್ತೊಂದು ಪ್ರತಿ ಮೈಸೂರು ಅರಮನೆಯಲ್ಲಿ ಹಾಗೂ ಮಗದೊಂದು ಪ್ರತಿಯನ್ನು ತಮ್ಮ ಪೂರ್ವಾಶ್ರಮದ ಮನೆತನದವರಿಗೆ ನೀಡಿದ್ದಾರೆ.

Uttaradi Muth ಹೀಗೆ ಗ್ರಂಥಲೇಖನ, ವ್ಯಾಖ್ಯಾನ ಮತ್ತು ಪಾಠ ಪ್ರವಚನಗಳ ಮೂಲಕ ಶ್ರೀಮದಾಚಾರ್ಯರ ವಿಶೇಷ ಸೇವೆ ಮಾಡಿದವರು ಶ್ರೀ ಸತ್ಯಧರ್ಮ ತೀರ್ಥರು ಎಂದರು.

ಎಲ್ಲಿ ಕೃಷ್ಣನೋ ಅಲ್ಲಿ ಜಯ :
ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಭಗವಂತನಿರುತ್ತಾನೆ. ಅಂತೆಯೇ ಪಾಂಡವರೊAದಿಗೆ ಶ್ರೀಕೃಷ್ಣನಿದ್ದ. ಹೀಗಾಗಿ ಪಾಂಡವರಿಗೆ ಜಯವಾಗಿತ್ತು. ಕೌರವರ ಸೇನೆ ಎಂದರೆ ಮಹಾ ಸಮುದ್ರವಿದ್ದಂತೆ. ಭೀಷ್ಮ, ದ್ರೋಣ, ಕರ್ಣರಂತಹ ಮಹಾ ಮಹಾ ಪರಾಕ್ರಮಿಗಳಿದ್ದರು.

ಬೃಹತ್ ಸೈನ್ಯ, ಆನೆ, ಕುದುರೆಗಳ ಬಲವಿತ್ತು. ಅವರನ್ನು ಸೋಲಿಸಲು ಕೇವಲ ಪಾಂಡವರಿಂದ ಅಸಾಧ್ಯವಾಗಿತ್ತು. ಆದರೂ ಪಾಂಡವರಿಗೆ ಜಯವಾಗಿದ್ದು ಶ್ರೀಕೃಷ್ಣ ಅವರೊಂದಿಗೆ ಇದ್ದ ಕಾರಣದಿಂದ. ಸಾವಿರಾರು ಜನರು ಯುದ್ಧ ಮಾಡುತ್ತಿದ್ದರೂ ಅರ್ಜುನನೊಬ್ಬನೇ ಉತ್ತರ ಕೊಡುತ್ತಿದ್ದ. ಅವನಿಗೆ ಆ ವೇಗದ ಗತಿ ಬಂದಿದ್ದೂ ಕೃಷ್ಣನ ಅನುಗ್ರಹದಿಂದ ಎಂದರು.

ಇದಕ್ಕೂ ಪೂರ್ವದಲ್ಲಿ ವೇಣುಗೋಪಾಲಾಚಾರ್ಯ ಮತ್ತು ಪೂಜಾ ಕಾಲದಲ್ಲಿ ಶ್ರೀಕಾಂತಾಚಾರ್ಯ ಮಾಳೂರು ಪ್ರವಚನ ನೀಡಿದರು. ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ಬಾಳಗಾರು ಜಯತೀರ್ಥಾಚಾರ್ಯ, ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು. ಪ್ರಕಾಶಾಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...