DVS College Of Arts & Science Shivamogga ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಜುಲೈ 14ರ ಬೆಳಗ್ಗೆ 10.30ಕ್ಕೆ “ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ, ಕರ್ನಾಟಕ ರಾಜ್ಯ ಬಜೆಟ್ ವಿಶ್ಲೇಷಣೆ 2023-24” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿವಿಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಡಿವಿಎಸ್ ಸಂಜೆ ಕಾಲೇಜು, ಐಕ್ಯೂಎಸಿ ಘಟಕ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಜುಲೈ 14ರ ಬೆಳಗ್ಗೆ 10.30ಕ್ಕೆ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ ಉದ್ಘಾಟಿಸುವರು. ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸುವರು.
ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಮುಂಗಡ ಪತ್ರ ಚರ್ಚೆಯ ಅಧ್ಯಕ್ಷತೆ ವಹಿಸುವರು. ನಿವೃತ್ತ ಸಹ ಪ್ರಾಧ್ಯಾಪಕ ಡಾ. ಎಚ್.ಎಂ.ಶಿವಕುಮಾರ್ ಮಾರ್ಗಸೂಚಕರಾಗಿರುವರು. ವಿವಿಧ ಕಾಲೇಜಿನ ಪ್ರಾಧ್ಯಾಪಕರು ಸಂವಾದ ಹಾಗೂ ಪ್ರತಿಕ್ರಿಯೆ ನೀಡುವರು.
DVS College Of Arts & Science Shivamogga ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಡಾ. ಎಂ.ಎಸ್.ಮಂಜುನಾಥ್, ಡಾ. ಬಿ.ಎನ್.ಹರೀಶ್, ಡಾ. ಜಿ.ನಾರಾಯಣರಾವ್, ಡಾ. ಧನಂಜಯ, ಡಾ. ಎ.ಟಿ.ಪದ್ಮೇಗೌಡ, ಪ್ರೊ. ಕುಮಾರಸ್ವಾಮಿ.ಎನ್., ಅರವಿಂದ ಜಿ.ವಿ. ಮತ್ತಿತರರು ಉಪಸ್ಥಿತರಿರುವರು.