HD Thammaiah ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮುಖಂಡರುಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಈ ಸಂಬಂಧಿ ಅಪರ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ ದಸಂಸ ಪದಾಧಿಕಾರಿಗಳು ದಲಿತ ಸಮುದಾಯದ ನಗರಸಭಾ ಪೌರಾಯುಕ್ತ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‌ಕುಮಾರ್ ಕಳೆದ ನಾಲ್ಕು ತಿಂಗಳು ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದಲಿತ ಅಧಿಕಾರಿ ನಗರಸಭೆಯ ಭ್ರಷ್ಟಚಾರವನ್ನು ತಡೆ ಹಿಡಿದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದರು.
ನಗರ ಸಭೆಯಲ್ಲಿ ಈ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸಿದವರು ಅತಿಹೆಚ್ಚು ಭ್ರಷ್ಟಚಾರವೆಸಗಿದ್ದರು. ಅವರ ವಿರುದ್ಧ ಹಲವಾರು ಕೇಸುಗಳು ಲೋಕಾಯುಕ್ತದಲ್ಲಿ ದಾಖಲಾಗಿತ್ತು. ಈ ಬಗ್ಗೆ ಕ್ಷೇತ್ರದ ಶಾಸಕರು ಸ್ವಜಾತೀಯ ಪ್ರೇಮದಿಂದ ಮೌಖಿಕವಾಗಿ ಮನವಿ ಮಾಡಿ ಭ್ರಷ್ಟç ಅಧಿಕಾರಿಯನ್ನು ರಾಜಕೀಯ ಪ್ರಭಾವ ಬಳಸಿ ಮಗದೊಮ್ಮೆ ಆಯುಕ್ತರಾಗಿ ಮಾಡಿರುವುದು ಜನತೆಯ ದುದೈರ್ವ ಎಂದರು.
ಕ್ಷೇತ್ರದ ಶಾಸಕರು ದಲಿತ ಅಧಿಕಾರಿ ಉಮೇಶ್ ಅವರನ್ನು ವರ್ಗಾವಣೆಗೊಳಿಸಿ ಹಿಂದಿನ ಅಧಿಕಾರಿ ಬಸವರಾಜ್ ಅವರಿಗೆ ಆದ್ಯತೆ ನೀಡಿರುವುದು ಸೂಕ್ತವಲ್ಲ. ಇದನ್ನು ಮುಂದಿನ ದಿನಗಳಲ್ಲಿ ದಲಿತ ಸಮುದಾಯ ಪಾಠ ಕಲಿಸದೇ ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ದಲಿತರ ಪರ ಎಂದು ಹೇಳುತ್ತಿದೆಯಾದರೂ ಪೌರಾಯುಕ್ತರ ವರ್ಗಾವಣೆಯ ಈ ನಿರ್ಧಾರ ದಲಿತರಿಗೆ ಮಾಡಿದ ಅನ್ಯಾಯವಾಗಿದೆ. ಈ ಬಗ್ಗೆ ಕಾಂಗ್ರೇಸ್ ದಲಿತ ನಾಯಕರು ಹಾಗೂ ಮುಖಂಡರುಗಳು ಧ್ವನಿ ಎತ್ತದಿರುವುದು ವಿಷಾಧನೀಯ ಎಂದು ತಿಳಿಸಿದರು.
HD Thammaiah ಈ ಸಂದರ್ಭದಲ್ಲಿ ದಸಂಸ ಮಹಿಳಾ ಜಿಲ್ಲಾ ಸಂಚಾಲಕಿ ಅರುಣಾಕ್ಷಿ, ಮುಖಂಡರಾದ ದಿಲೀಪ್, ರೇಣುಕ ಹಾಜರಿದ್ದರು